ಬೆಂಗಳೂರಿನ ವೈಟ್ಫೀಲ್ಡ್ನಲ್ಲಿ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ಎನ್ಎಐ ಬಿಜೆಪಿ ಕಾರ್ಯಕರ್ತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಸಾಯಿ ಪ್ರಸಾದ್ನನ್ನು ಎನ್ಐಎ ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಈತನನ್ನು ಪ್ರಕರಣದಲ್ಲಿ ಸಾಕ್ಷಿಯಾಗಿ ಪರಿಗಣಿಸಿ ವಿಚಾರಣೆ ನಡೆಸಿ ಬಿಟ್ಟು ಕಳುಹಿಸಿದ್ದಾರೆ.
ಈಗ ನ್ಯಾಯಾಂಗ ಬಂಧನದಲ್ಲಿರುವ ಮುಜಾಮಿಲ್ಗೆ ಸಾಯಿ ಪ್ರಸಾದ್ ಮೊಬೈಲ್ ಮಾರಾಟ ಮಾಡಿದ್ದ. ಇದೇ ಮುಜಾಮಿಲ್ ಮತ್ತೊಬ್ಬ ಆರೋಪಿ ಮುಸಾವೀರ್ಗೆ ಮೊಬೈಲ್ ಸಿಮ್ ಕೊಟ್ಟಿದ್ದ. ಆ ಸಿಮ್ಗೆ ಮುಸಾವೀರ್ ಬಳಸಿದ್ದು ಸಾಯಿ ಪ್ರಸಾದ್ ಮಾರಾಟ ಮಾಡಿದ್ದ ಮೊಬೈಲ್.
ಬಿಜೆಪಿ ಕಾರ್ಯಕರ್ತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬೆನ್ನಲ್ಲೇ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಡುವೆ ವಾಗ್ವಾದ ನಡೆದಿದೆ.
“ಭ್ರಷ್ಟ ಜನತಾ ಪಾರ್ಟಿ“ ಎಂದು ಹೆಸರಾಗಿದ್ದ ಬಿಜೆಪಿ ಈಗ “ಬಾಂಬ್ ಜನತಾ ಪಾರ್ಟಿ” ಎಂಬ ಹೆಸರು ಪಡೆಯಲು ಮುಂದಾಗಿದೆಯೇ!ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ತನಿಖೆ ನಡೆಸುತ್ತಿದ್ದ NIA ಈಗ ಆರೋಪಿಗಳನ್ನು ಹುಡುಕುತ್ತಾ ಬಿಜೆಪಿ ಬಾಗಿಲಲ್ಲಿ ಬಂದು ನಿಂತಿದೆ. ಈ ಪ್ರಕರಣದಲ್ಲಿ ಬಿಜೆಪಿ ಮುಖಂಡ, ತೀರ್ಥಹಳ್ಳಿ ತಾಲ್ಲೂಕಿನ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯನ್ನು ಬಂಧಿಸಿದೆ. ನಾವು ಬ್ರಾಂಡ್ ಬೆಂಗಳೂರು ಮಾಡಲು ಹೊರಟಿದ್ದರೆ ಬಿಜೆಪಿ “ಬಾಂಬ್ ಬೆಂಗಳೂರು” ಮಾಡಲು ಹೊರಟಿದೆಯೇ.? ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಬಿಜೆಪಿ ತಮ್ಮ ಕಾರ್ಯಕರ್ತರ ಮೂಲಕ ಷಡ್ಯಂತ್ರ ರೂಪಿಸಿದೆಯೇ? NIA ತನಿಖಾ ಸಂಸ್ಥೆ ಜಗನ್ನಾಥ ಭವನವನ್ನೂ ಒಮ್ಮೆ ಶೋಧಿಸಿದರೆ ಸೂಕ್ತವಲ್ಲವೇ..?
ಕಾಂಗ್ರೆಸ್ ಟ್ವೀಟಿಸಿದೆ.
ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ,
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ @INCKarnataka ಸುಳ್ಳು ಸುದ್ದಿ ಹರಡಿ ಬ್ರದರ್ಸ್ಗಳನ್ನು ರಕ್ಷಣೆ ಮಾಡಲು ಮುಂದಾಗಿದೆ.
ಸುಳ್ಳು ಸುದ್ದಿ ಹರಡುತ್ತಿದ್ದ ಐಟಿ ಸೆಲ್ ವಿಭಾಗದ ಮುಖ್ಯಸ್ಥ @PriyankKharge ಅವರನ್ನು ಆ ಸ್ಥಾನದಿಂದ ಕಿತ್ತು ಬಿಸಾಡಿದರೂ, ಕಾಂಗ್ರೆಸ್ ಐಟಿ ಸೆಲ್ ಸುಳ್ಳು ಸುದ್ದಿ ಹರಡುವ ತನ್ನ ಮೊಣಕಾಲು ಕೆಳಗಿನ ಬುದ್ಧಿ ಬಿಟ್ಟಿಲ್ಲ.
ಸಾಕ್ಷಿ ವಿಚಾರಣೆ ಮಾಡುವುದಕ್ಕೂ, ಆರೋಪಿ ವಿಚಾರಣೆ ಮಾಡುವುದಕ್ಕೂ ವ್ಯತ್ಯಾಸ ತಿಳಿಯದ ಅಜ್ಞಾನಿಗಳು ಕಾಂಗ್ರೆಸ್ನ ಪಾ’ಕೈಂ’ಡಿ ಗಳು.
ಎಂದು ಬಿಜೆಪಿ ಟ್ವೀಟಿಸಿದೆ.
ಇತ ಬಿಜೆಪಿ ಕಾರ್ಯಕರ್ತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರ ಆಗ್ತಿದ್ದಂತೆ ರಾಷ್ಟ್ರೀಯ ತನಿಖಾ ದಳ ಕೂಡಾ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ಅನಧಿಕೃತ ಸುದ್ದಿಗಳಿಂದ ತನಿಖೆಗೆ ಹಿನ್ನಡೆ ಆಗಲಿದೆ, ಶಂಕಿತರ ಪತ್ತೆಗೆ ಹಿನ್ನಡೆಗೆ ಆಗಲಿದೆ ಎಂದು ಎನ್ಐಎ ಹೇಳಿದೆ.