ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ವಾರಣಾಸಿ ಕ್ಷೇತ್ರದಿಂದ ಪ್ರಧಾನಿ ಮೋದಿ ವಿರುದ್ಧ ತೃತೀಯ ಲಿಂಗಿ ಹಿಮಾಂಗಿ ಸಖಿ ಎನ್ನುವವರು ಕಣಕ್ಕಿಳಿಯುತ್ತಿದ್ದಾರೆ. ಅವರ ಹಿನ್ನಲೆಯೇನು ಎಂದು ನೋಡೋಣ.
ಹಿಮಾಂಗಿ ಸಖಿಗೆ ಹಿಂದೂ ಮಹಾಸಭಾ ಟಿಕೆಟ್ ನೀಡಿದೆ. ದೇಶದ ಮೊದಲ ತೃತೀಯ ಲಿಂಗಿ ಎಂಬ ಖ್ಯಾತಿಯ ಹಿಮಾಂಗಿ ಸಖಿ ಈಗ ಮೋದಿ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಇವರ ವಿಶೇಷತೆ ಏನೆಂದರೆ 5 ಭಾಷೆಗಳಲ್ಲಿ ಭಾಗವತ ಕತೆಯನ್ನು ಹೇಳುವ ಸಾಮರ್ಥ್ಯ ಅವರದ್ದಾಗಿದೆ.
ಈ ಚುನಾವಣೆಯಲ್ಲಿ ಯಾರನ್ನೂ ಸೋಲಿಸುವುದು ನನ್ನ ಉದ್ದೇಶವಲ್ಲ. ಆದರೆ ಗೆದ್ದು ಅನೇಕ ಕೆಲಸಗಳನ್ನು ಮಾಡಬೇಕಿದೆ. ತೃತೀಯ ಲಿಂಗಿಗಳಿಗೂ ಸಮಾನ ಅವಕಾಶ ಸಿಗುವಂತಾಗಬೇಕು. ಜನರ ಪರವಾಗಿ ಕೆಲಸ ಮಾಡುವುದೇ ನನ್ನ ಉದ್ದೇಶ ಎಂದು ಹೇಳಿದ್ದಾರೆ.
ಹಿಮಾಂಗಿ ಸಖಿ ತಂದೆ ಗುಜರಾತಿ,ತಾಯಿ ಪಂಜಾಬಿ. ಈಕೆ ಕೃಷ್ಣನ ಭಕ್ತೆ. ಇದೇ ಕಾರಣಕ್ಕೆ ಮುಂಬೈನಲ್ಲಿ ತಮ್ಮ ಮನೆ ಪಕ್ಕವೇ ಇಸ್ಕಾನ್ ದೇವಾಲಯ ತೆರೆದರು. ಆರಂಭದಲ್ಲಿ ಅವರು ಕಾನ್ವೆಂಟ್ ಶಾಲೆಯಲ್ಲಿ ಓದಿದರು. ಬಳಿಕ ಪೋಷಕರು ತೀರಿಕೊಂಡ ಮೇಲೆ ಶಾಲೆ ಬಿಟ್ಟರು. ತಂದೆ ಸಿನಿಮಾ ವಿತರಕರಾಗಿದ್ದರು. ಹೀಗಾಗಿ ಹಿಮಾಂಗಿ ಕೂಡಾ ಕೆಲವೊಂದು ಸಿನಿಮಾ, ಟಿವಿ ಶೋನಲ್ಲಿ ಕಾಣಿಸಿಕೊಂಡಿದ್ದರು. ವಿಶೇಷ ಪೋಷಾಕು ಧರಿಸುವ ಹಿಮಾಂಗಿ ಈಗ ಪ್ರಧಾನಿ ಮೋದಿ ವಿರುದ್ಧ ಕಣಕ್ಕಿಳಿಯುತ್ತಿದ್ದಾರೆ.