ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಸೋಲಾಗುತ್ತಾ..? 6 ಚುನಾವಣೆಯಲ್ಲಿ ತನ್ನ ಹಿಡಿತದಲ್ಲೇ ಇಟ್ಟುಕೊಂಡಿದ್ದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರವನ್ನು ಈ ಬಾರಿ ಬಿಜೆಪಿ ಕಳೆದುಕೊಳ್ಳುತ್ತಾ..?
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ 6 ಬಾರಿ ಸಂಸದರಾಗಿದ್ದ ಅನಂತ್ ಕುಮಾರ್ ಹೆಗಡೆ ಬದಲು ಮಾಜಿ ಸಚಿವ, ಮಾಜಿ ಸ್ಪೀಕರ್ ಮತ್ತು ಮಾಜಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.
ಕಾಂಗ್ರೆಸ್ನಿಂದ ಖಾನಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಡಾ ಅಂಜಲಿ ನಿಂಬಾಳ್ಕರ್ ಕಣದಲ್ಲಿದ್ದಾರೆ.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಮುಖ ಚುನಾವಣಾ ವಿಶ್ಲೇಷಣಾ ಸಂಸ್ಥೆ ಚಾಣಕ್ಯ ನೀಡಿರುವ ಅಂದಾಜು ಬಿಜೆಪಿಯ ನಿದ್ದೆಗೆಡಿಸುವುದು ನಿಶ್ಚಿತ.
ಈ ಅಂದಾಜಿನ ಪ್ರಕಾರ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮಹಿಳೆಯರ ಮತಗಳು ಕಾಂಗ್ರೆಸ್ನತ್ತ ವಾಲಿದ್ದು ಕಾಂಗ್ರೆಸ್ಗೆ ದೊಡ್ಡ ಬಲ ಸಿಕ್ಕಂತಾಗಿದೆ.
ಪಾರ್ಥದಾಸ್ ಅವರ ಲೆಕ್ಕಾಚಾರದ ಪ್ರಕಾರ ಉತ್ತರ ಕನ್ನಡ ಜಿಲ್ಲೆಯಲ್ಲಿ ಪುರುಷ ಮತದಾರರ ಪೈಕಿ ಶೇಕಡಾ 41ರಷ್ಟು ಮಂದಿ ಕಾಂಗ್ರೆಸ್ಗೆ ಮತ ಹಾಕಲಿದ್ದಾರೆ. ಬಿಜೆಪಿಗೆ ಶೇಕಡಾ 58.2ರಷ್ಟು ಮಂದಿ ಮತ ಹಾಕಲಿದ್ದಾರೆ.
ಇನ್ನು ಮಹಿಳಾ ಮತದಾರರ ಪೈಕಿ ಕಾಂಗ್ರೆಸ್ಗೆ ಬರೋಬ್ಬರೀ ಶೇಕಡಾ 65.8ರಷ್ಟು ಮಂದಿ ಮತ್ತು ಬಿಜೆಪಿ ಕೇವಲ 30.9ರಷ್ಟು ಮಂದಿ ಮತ ಹಾಕಲಿದ್ದಾರೆ.
2019ರಲ್ಲಿ ಅಂದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ 74.16ರಷ್ಟು ಮತದಾನವಾಗಿತ್ತು.
ಈ ಬಾರಿ ಕ್ಷೇತ್ರದಲ್ಲಿ 16 ಲಕ್ಷದ 41 ಸಾವಿರದ 156 ಮಂದಿ ಮತದಾರರಿದ್ದಾರೆ. ಇವರಲ್ಲಿ ಪುರುಷ ಮತದಾರರು 8 ಲಕ್ಷದ 23 ಸಾವಿರದ 604 ಮತ್ತು ಮಹಿಳಾ ಮತದಾರರು 8 ಲಕ್ಷದ 17 ಸಾವಿರದ 536.
ಪಾರ್ಥದಾಸ್ ಅವರ ಅಂದಾಜಿನ ಪ್ರಕಾರ ಪುರುಷ ಮತ್ತು ಮಹಿಳಾ ಮತದಾರ ಒಟ್ಟು ಮತಗಳಲ್ಲಿ ಬಿಜೆಪಿಗೆ ಸಿಗಬಹುದಾದ ಮತ ಪ್ರಮಾಣ ಶೇಕಡಾ 89.1.
ಆದರೆ ಕಾಂಗ್ರೆಸ್ಗೆ ಬೀಳಬಹುದಾದ ಪುರುಷ ಮತ್ತು ಮಹಿಳಾ ಮತದಾರರ ಒಟ್ಟು ಮತಗಳ ಶೇಕಡಾವಾರು ಪ್ರಮಾಣ 106.8ರಷ್ಟು.
ಅಂದರೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಶೇಕಡಾ 17.7ರಷ್ಟು ಮತ ವ್ಯತ್ಯಾಸ ಇರಲಿದೆ.
ಒಂದು ವೇಳೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಹಿಳಾ ಮತದಾನ ಪ್ರಮಾಣ ಜಾಸ್ತಿಯಾದರೆ ಅದು ಬಿಜೆಪಿಗೆ ದೊಡ್ಡ ಹೊಡೆತ ನೀಡಲಿದೆ.
ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ಲೋಕಸಭೆಯಲ್ಲಿ ಗೆದ್ದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ವರ್ಷಕ್ಕೆ 1 ಲಕ್ಷ ರೂಪಾಯಿ ನೀಡುವ ನ್ಯಾಯ ಗ್ಯಾರಂಟಿ ಕಾಂಗ್ರೆಸ್ನತ್ತ ಮಹಿಳಾ ಮತಗಳನ್ನು ವರ್ಗಾಯಿಸಿರುವುದು ಮೇಲ್ನೋಟಕ್ಕೆ ಕಾಣ್ತಿದೆ.