ಮಹಿಳೆಯ ಕಿಡ್ನಾಪ್ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಎಚ್.ಡಿ ರೇವಣ್ಣಗೆ 17 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಹೀಗಾಗಿ ರೇವಣ್ಣ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.
ವಿಚಾರಣಾಧೀನ ಕೈದಿಯಾಗಿರುವ ಆರೋಪಿ ರೇವಣ್ಣಗೆ ಎಂಟ್ರಿ ನಂಬರ್ 4567. ಲೈಂಗಿಕ ಕಿರುಕುಳ ಮತ್ತು ಕಿಡ್ನಾಪಿಂಗ್ ಕೇಸ್ ಎದುರಿಸುತ್ತಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ ಮೇ 4ರಂದು ಬಂಧಿತರಾಗಿದ್ದರು. ಮೇ 8ರವರೆಗೂ ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಮೇ 14ರವರೆಗೂ ನ್ಯಾಯಾಂಗ ವಶದಲ್ಲಿರುವ ರೇವಣ್ಣ ಜಾಮೀನು ಅರ್ಜಿ ನಾಳೆ ಗುರುವಾರ ವಿಚಾರಣೆ ನಡೆಯಲಿದೆ.ಒಂದು ವೇಳೆ ರೇವಣ್ಣಗೆ ಜಾಮೀನು ಸಿಗದಿದ್ದರೆ 14ರವರೆಗೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನದೂಡಲಿದ್ದಾರೆ.