ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಯೋಚನೆ ಮಾಡಿದ್ದಾರಾ..?
ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಎರಡು ತಿಂಗಳಲ್ಲಿ ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಲಿದ್ದಾರೆ.
ಇಂಥದ್ದೊಂದು ಚರ್ಚೆ ಈಗ ಉತ್ತರಪ್ರದೇಶದಲ್ಲಿ ತೀವ್ರವಾಗಿದೆ.
ನರೇಂದ್ರ ಮೋದಿಯವರು ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಸುಮಿತ್ರಾ ಮಹಾಜನ್, ಮನೋಹರ್ ಲಾಲ್ ಕಟ್ಟರ್ ಮತ್ತು ಶಿವರಾಜ್ ಸಿಂಗ್ ಚವ್ಹಾಣ್ ಅವರ ರಾಜಕೀಯ ಜೀವನ ಮುಗಿಸಿದ್ದಾರೆ.
ಮುಂದಿನ ಸರದಿ ಯೋಗಿ ಆದಿತ್ಯನಾಥ್ ಅವರದ್ದು. ಒಂದು ವೇಳೆ ಈ ಬಾರಿ ಮತ್ತೆ ಚುನಾವಣೆ ಗೆದ್ದರೆ ಎರಡು ತಿಂಗಳಲ್ಲಿ ಮುಖ್ಯಮಂತ್ರಿ ಪದವಿಯಿಂದ ಯೋಗಿ ಆದಿತ್ಯನಾಥ್ ಅವರನ್ನು ಕೆಳಗಿಳಿಸ್ತಾರೆ
ಎಂದು ದೆಹಲಿಯಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಇತ್ತ ಹಿರಿಯ ಪತ್ರಕರ್ತ ರಾಜ್ದೀಪ್ ಸರ್ದೇಸಾಯಿ ಅವರಿಗೆ ನೀಡಿದ ಸಂದರ್ಶನದಲ್ಲಿಉತ್ತರಪ್ರದೇಶದ ಪ್ರಭಾವಿ ಬಿಜೆಪಿ ನಾಯಕ ಬ್ರಿಜ್ ಭೂಷಣ್ ಸಿಂಗ್ ಅವರು
ನಮ್ಮ ನಾಯಕ ಮೋದಿ ಮಾತ್ರ, ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಷ್ಟೇ
ಎಂದು ಹೇಳಿದ್ದಾರೆ.
ರಾಷ್ಟ್ರ ರಾಜಕಾರಣದಲ್ಲಿ ಮೋದಿ ಬಳಿಕ ಬಿಜೆಪಿಯಲ್ಲಿ ಯಾರು ಎಂಬ ಪ್ರಶ್ನೆಗೆ ಪಕ್ಷದ ಕಾರ್ಯಕರ್ತರು ಕೊಡುತ್ತಿರುವ ಉತ್ತರ ಯೋಗಿ ಆದಿತ್ಯನಾಥ್.
ಆದರೆ ಯೋಗಿ ಅವರನ್ನೇ ಸಿಎಂ ಸ್ಥಾನದಿಂದ ಇಳಿಸುವ ಮೂಲಕ ತಮಗೆ ಪ್ರತಿಸ್ಪರ್ಧಿ ಆಗಲಿರುವ ಯೋಗಿ ಆದಿತ್ಯನಾಥ್ಗೆ ಕಡಿವಾಣ ಹಾಕುವುದಕ್ಕೆ ಮೋದಿ-ಶಾ ಯೋಚಿಸ್ತಿದ್ದಾರೆ ಎಂಬ ಚರ್ಚೆಗೆ ಈಗ ಲೋಕಸಭಾ ಚುನಾವಣೆಯಲ್ಲಿ ಮತ್ತೆ ರೆಕ್ಕೆ ಪುಕ್ಕ ಸಿಕ್ಕಿದೆ.
ADVERTISEMENT
ADVERTISEMENT