ಕಾಂಗ್ರೆಸ್ ಪಕ್ಷದ ಅತ್ಯಂತ ಮಹತ್ವಾಕಾಂಕ್ಷಿ ಘೋಷಣೆಗಳಲ್ಲಿ ಒಂದಾಗಿರುವ ಮಹಿಳೆಯರಿಗೆ ಒಂದು ಲಕ್ಷ ರೂಪಾಯಿ ನೀಡುವ ಮಹಾಲಕ್ಷ್ಮೀ ಯೋಜನೆ ಜಾರಿಗೆ ದಿನಾಂಕ ಘೋಷಣೆಯಾಗಿದೆ.
ಜುಲೈ 1ರಂದು ಮಹಾಲಕ್ಷ್ಮೀ ಯೋಜನೆಯಡಿಯಲ್ಲಿ ಬಡ ಕುಟುಂಬದ ಮಹಿಳೆಯರ ಖಾತೆಗೆ ಮೊದಲ ಕಂತು ಜಮೆ ಆಗಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಘೋಷಿಸಿದ್ದಾರೆ.
2024ರ ಜುಲೈ 1ರಂದು ಬೆಳಗ್ಗೆ ಬಡ ಕುಟುಂಬದ ಮಹಿಳೆಯರು ತಮ್ಮ ಅಕೌಂಟ್ ಚೆಕ್ ಮಾಡಿದ್ರೆ ಆವತ್ತು ಆ ಆಕೌಂಟ್ನಲ್ಲಿ 8,500 ರೂಪಾಯಿ ಜಮೆ ಆಗಿರಲಿದೆ. ಮತ್ತು ಅದೇ ರೀತಿಯಲ್ಲಿ ಇಂಡಿಯಾ ಮೈತ್ರಿಕೂಟದ ಸರ್ಕಾರದಿಂದ ಪ್ರತಿ ತಿಂಗಳ ಮೊದಲ ತಾರೀಕಿನಂದು ಖಾತೆಗೆ ಹಣ ಜಮೆ ಮಾಡಲಿದೆ.
ಇದು ನಿಮ್ಮ ಒಂದು ಮತದ ತಾಕತ್ತು. ಕಾಂಗ್ರೆಸ್ನ ಜೊತೆಗೆ ಮಹಿಳೆಯರ ಶಕ್ತಿ ಮತ್ತು ಬದಲಾಗಲಿದೆ ಸ್ಥಿತಿ
ಎಂದು ಉತ್ತರಪ್ರದೇಶದ ರಾಯಬರೇಲಿಯಲ್ಲಿ ಬಹಿರಂಗ ಸಮಾವೇಶದಲ್ಲಿ ರಾಹುಲ್ ಅವರು ಘೋಷಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ ಮಹಾಲಕ್ಷ್ಮೀ ಯೋಜನೆಯಡಿಯಲ್ಲಿ ಬಡ ಕುಟುಂಬಕ್ಕೆ ವರ್ಷಕ್ಕೆ 1 ಲಕ್ಷ ರೂಪಾಯಿ ನೀಡುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದೆ.
ಜೂನ್ 1ರಂದು ಕಡೆಯ ಹಂತದ ಮತದಾನ ನಡೆಯಲಿದ್ದು, ಜೂನ್ 4ರಂದು ಲೋಕಸಭೆಯ ಫಲಿತಾಂಶ ಪ್ರಕಟವಾಗಲಿದೆ.
ADVERTISEMENT
ADVERTISEMENT