ಲೋಕಸಭಾ ಚುನಾವಣೆಯಲ್ಲಿ ಕೊನೆಯ ಹಂತದ ಮತದಾನ ಮುಕ್ತಾಯವಾಗಲು ಕೆಲವೇ ಹೊತ್ತು ಬಾಕಿ ಇರುವ ಹೊತ್ತಲ್ಲಿ ಇಂಡಿಯಾ ಮೈತ್ರಿಕೂಟದ ಮಹತ್ವ ಸಭೆ ಆರಂಭವಾಗಿದೆ.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಇಂಡಿಯಾ ಮೈತ್ರಿಕೂಟದ ಪಕ್ಷಗಳ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಜೂನ್ 4ರಂದು ಪ್ರಕಟವಾಗುವ ಫಲಿತಾಂಶದಲ್ಲಿ ಇಂಡಿಯಾ ಮೈತ್ರಿಕೂಟ ಬಹುಮತ ನಿರೀಕ್ಷೆಯಲ್ಲಿರುವ ಹಿನ್ನೆಲೆಯಲ್ಲಿ ಮುಂದಿನ ಕಾರ್ಯತಂತ್ರಗಳ ಬಗ್ಗೆ ಸಮಾಲೋಚನೆ ಮಾಡಲಾಗುತ್ತಿದೆ.
ಇಂಡಿಯಾ ಮೈತ್ರಿಕೂಟದಲ್ಲಿ 36 ಪಕ್ಷಗಳಿವೆ.
ಕಾಂಗ್ರೆಸ್, ಸಿಪಿಐ, ಸಿಪಿಐಎಂ, ಎನ್ಸಿಪಿ, ಆಮ್ ಆದ್ಮಿ ಪಕ್ಷ, ಸಮಾಜವಾದಿ ಪಕ್ಷ, ಆರ್ಜೆಡಿ, ಜೆಎಂಎಂ, ಡಿಎಂಕೆ, ಶಿವಸೇನೆ ಉದ್ಧವ್ ಠಾಕ್ರೆ ಬಣ, ನ್ಯಾಷನಲ್ ಕಾನ್ಫೆರೆನ್ಸ್, ಪಿಡಿಪಿ, ಸಿಪಿಐಎಂಎಲ್, ಆರ್ಎಲ್ಪಿ, ಎಂಡಿಎಂಕೆ, ಇಂಡಿಯನ್ ಮುಸ್ಲಿಂ ಲೀಗ್ ಪ್ರಮುಖ ಪಕ್ಷಗಳು.
ಒಂದು ವೇಳೆ ಬಹುಮತ ಕೊರತೆ ಆದರೆ ಆಗ ಎನ್ಡಿಎಯೇತರ ಮತ್ತು ಇಂಡಿಯಾಯೇತರ ಮೈತ್ರಿಕೂಟದ ಪಕ್ಷಗಳಾದ ವೈಎಸ್ಆರ್ ಕಾಂಗ್ರೆಸ್, ಟಿಎಂಸಿ, ಬಿಜೆಡಿ ಜೊತೆಗೆ ಮಾತುಕತೆ ನಡೆಸುವ ಬಗ್ಗೆಯೂ ಸಮಾಲೋಚನೆ ನಡೆಸಲಾಗುತ್ತದೆ.
ADVERTISEMENT
ADVERTISEMENT