ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಪ್ರಕಟವಾದ ಎಕ್ಸಿಟ್ ಪೋಲ್ಗಳ ಕಾರಣದಿಂದ ಇವತ್ತು ಷೇರು ಮಾರುಕಟ್ಟೆ ಹಿಂದೆಂದೂ ಕಂಡರಿಯದ ದಾಖಲೆ ಪ್ರಮಾಣದಲ್ಲಿ ಏರಿಕೆ ಆಗಿದೆ.
ಷೇರು ಪೇಟೆಯಲ್ಲಿನ ಈ ಭಾರೀ ಏರಿಕೆಯಿಂದ ಲಾಭ ಆಗಿರುವುದು ಅದಾನಿ ಕಂಪನಿಗಳಿಗೆ. ಅದಾನಿ ಕಂಪನಿಗಳ ಷೇರುಗಳ ಮೌಲ್ಯ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಅದಾನಿ ಪೋರ್ಟ್ಸ್, ಅಂದಾನಿ ಎಂಟರ್ಪ್ರೈಸಸ್, ಅದಾನಿ ಪವರ್, ಅದಾನಿ ಗ್ರೀನ್, ಅದಾನಿ ಟೋಟಲ್ ಗ್ಯಾಸ್ ಕಂಪನಿಗಳ ಷೇರು ಮೌಲ್ಯ ಭಾರೀ ಎರಿಕೆ ಆಗಿದೆ.
ಬೆಳಗ್ಗೆ ವ್ಯವಹಾರ ಆರಂಭವಾಗ್ತಿದ್ದಂತೆ ಬಿಎಸ್ಇ ಸೂಚ್ಯಂಕ 2,125 ಅಂಕಗಳಷ್ಟು ದಾಖಲೆಯ ಏರಿಕೆ ಕಂಡು 76 ಸಾವಿರ ಅಂಕಗಳ ಗಡಿ ದಾಟಿದೆ.
ನಿಫ್ಟಿ ಬರೋಬ್ಬರೀ 807 ಅಂಕಗಳಷ್ಟು ಏರಿಕೆ ಕಂಡು 23,330 ಅಂಕಗಳ ಗಡಿ ದಾಟಿದೆ.
ನಿಫ್ಟಿ ಮಿಡ್ ಕ್ಯಾಪ್ ಕೂಡಾ 1,999 ಅಂಕಗಳ ಏರಿಕೆ ಕಂಡು 53,705 ಅಂಕಗಳ ಗಡಿ ದಾಟಿದೆ.
ನಿಫ್ಟಿ ಸ್ಮಾಲ್ ಕ್ಯಾಪ್ 298 ಅಂಕಗಳ ಏರಿಕೆ ಕಂಡು 8 ಸಾವಿರದ ಗಡಿ ದಾಟಿದೆ.
ನಿಫ್ಟಿ ಬ್ಯಾಂಕ್ 1,900 ಅಂಕಗಳ ಏರಿಕೆ ಕಂಡು 50,800ರ ಗಡಿ ದಾಟಿದೆ.
ಇದೇ ಮೊದಲ ಬಾರಿಗೆ ಒಂದೇ ದಿನ ಷೇರು ಮಾರುಕಟ್ಟೆ ಈ ಪ್ರಮಾಣದಲ್ಲಿ ಏರಿಕೆ ಕಂಡಿದೆ.
ಚುನಾವಣೋತ್ತರ ಸಮೀಕ್ಷೆಗಳು ಮೂರನೇ ಬಾರಿಗೆ ಮೋದಿ ಪ್ರಧಾನಿ ಆಗಲಿದ್ದಾರೆ ಎಂದು ಅಂದಾಜಿಸಿವೆ.
ADVERTISEMENT
ADVERTISEMENT