71 ಮಂದಿ ಸಚಿವರನ್ನು ಒಳಗೊಂಡ ಪ್ರಧಾನಿ ನರೇಂದ್ರ ಮೋದಿ ಅವರ ಪೂರ್ಣ ಪ್ರಮಾಣದ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಬಿಜೆಪಿಗೆ ಬಹುಮತ ಇಲ್ಲದೇ ಇದ್ದರೂ ಮಿತ್ರಪಕ್ಷಗಳ ಸಹಕಾರದೊಂದಿಗೆ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಹಾಗಾದರೆ ಯಾವ ಯಾವ ಮಿತ್ರ ಪಕ್ಷಗಳಿಗೆ ಮೋದಿ ಸಂಪುಟದಲ್ಲಿ ಎಷ್ಟು ಸಚಿವ ಸ್ಥಾನ ಸಿಕ್ಕಿದೆ..?
-
ಬಿಜೆಪಿ – 240 ಸಂಸದರು – 61 ಸಚಿವ ಸ್ಥಾನ
-
ಟಿಡಿಪಿ – 16 ಸಂಸದರು – 2 ಸಚಿವ ಸ್ಥಾನ
-
ಜೆಡಿಯು – 12 ಸಂಸದರು – 2 ಸಚಿವ ಸ್ಥಾನ
-
ಶಿವಸೇನೆ – 7 ಸಂಸದರು – 1 ಸಚಿವ ಸ್ಥಾನ
-
ಎಲ್ಜೆಪಿ – 5 ಸಂಸದರು – 1 ಸಚಿವ ಸ್ಥಾನ
-
ಜನಸೇನಾ – 2 ಸಂಸದರು – ಸಚಿವ ಸ್ಥಾನ ಕೊಟ್ಟಿಲ್ಲ
-
ಜೆಡಿಎಸ್ – 2 ಸಂಸದರು – 1 ಸಚಿವ ಸ್ಥಾನ
-
ಆರ್ಎಲ್ಡಿ – 2 ಸಂಸದರು – 1 ಸಚಿವ ಸ್ಥಾನ
-
ಹೆಚ್ಎಎಂ – 1 ಸಂಸದರು – 1 ಸಚಿವ ಸ್ಥಾನ
-
ಅಸ್ಸಾಂ ಗಣ ಪರಿಷತ್ – 1 ಸಂಸದರು – ಸಚಿವ ಸ್ಥಾನ ಇಲ್ಲ
-
ಎನ್ಸಿಪಿ – 1 ಸಂಸದರು – ಸಚಿವ ಸ್ಥಾನ ಇಲ್ಲ – ಪ್ರಫುಲ್ ಪಟೇಲ್ ಅವರಿಗೆ ನೀಡಲಾಗಿದ್ದ ರಾಜ್ಯ ಖಾತೆಯನ್ನು ಎನ್ಸಿಪಿ ಅಜಿತ್ ಪವಾರ್ ಬಣ ತಿರಸ್ಕರಿಸಿದ್ದು, ಕ್ಯಾಬಿನೆಟ್ ಸ್ಥಾನಕ್ಕಾಗಿ ಪಟ್ಟು ಹಿಡಿದಿದೆ.
-
ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ – 1 ಸಂಸದರು – ಸಚಿವ ಸ್ಥಾನ ಇಲ್ಲ
-
ಅಪ್ನಾದಳ್ – 1 ಸಂಸದರು – 1 ಸಚಿವ ಸ್ಥಾನ
-
ಎಜೆಎಸ್ಯು – 1 ಸಂಸದರು – ಸಚಿವ ಸ್ಥಾನ ಇಲ್ಲ
-
ಯುಪಿಪಿಎಲ್ – 1 ಸಂಸದರು – ಸಚಿವ ಸ್ಥಾನ ಇಲ್ಲ
-
ಆರ್ಪಿಐ – ಸಂಸದರೇ ಇಲ್ಲ – 1 ಸಚಿವ ಸ್ಥಾನ – ರಾಮ್ದಾಸ್ ಅಠಾವಳೆ ಅವರು ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಈ ಮೂಲಕ ಎನ್ಡಿಎ ಮೈತ್ರಿಕೂಟದ 6 ಪಾಲುದಾರ ಪಕ್ಷಗಳಿಗೆ ಮೋದಿ ಸಂಪುಟದಲ್ಲಿ ಸಚಿವ ಸ್ಥಾನ ಕೊಟ್ಟಿಲ್ಲ.
ADVERTISEMENT
ADVERTISEMENT