ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. 16 ಮಂದಿ ಸಚಿವರು ಮತ್ತೆ ಮೋದಿ ಅವರ ಸಂಪುಟದಲ್ಲಿ ಅವಕಾಶ ಪಡೆದಿದ್ದಾರೆ.
ಮಾಹಿತಿಗಳ ಪ್ರಕಾರ ಈ ಬಾರಿ ವಾಪಸ್ಸಾಗಿರುವ ಈ 16 ಮಂದಿ ಸಚಿವರ ಖಾತೆಗಳಲ್ಲಿ ಬದಲಾವಣೆ ಆಗುವ ನಿರೀಕ್ಷೆ ಇದೆ.
ಮೋದಿ ಸರ್ಕಾರದಲ್ಲಿ ಕೇಂದ್ರ ಗೃಹ ಖಾತೆ ಮತ್ತು ಸಹಕಾರ ಸಚಿವರೂ ಆಗಿದ್ದ ಅಮಿತ್ ಶಾಗೆ ಈ ಬಾರಿ ಹೊಸ ಖಾತೆ ಸಿಗಬಹುದು.
ಶಾ ಅವರು ಹಣಕಾಸು ಸಚಿವರಾಗುವ ನಿರೀಕ್ಷೆ ಇದೆ. ಈ ಮೂಲಕ ಹಣಕಾಸು ಸಚಿವರಾಗಿದ್ದ ನಿರ್ಮಲಾ ಸೀತಾರಾಮನ್ ಖಾತೆಯಲ್ಲೂ ಬದಲಾವಣೆ ಆಗಲಿದೆ.
ಪ್ರಧಾನಿಯವರ ಮೊದಲ ಅವಧಿಯಲ್ಲಿ ಗುಜರಾತ್ ಮೂಲದ ಅರುಣ್ ಜೇಟ್ಲಿಯವರೇ ಹಣಕಾಸು ಸಚಿವರಾಗಿದ್ದರು. ಜೇಟ್ಲಿ ನಿಧನದ ಬಳಿಕ ಪಿಯೂಷ್ ಗೋಯಲ್ ಮತ್ತು ಆ ಬಳಿಕ ನಿರ್ಮಲಾ ಸೀತಾರಾಮನ್ ಹಣಕಾಸು ಸಚಿವರಾದರು.
ADVERTISEMENT
ADVERTISEMENT