ಲೈಂಗಿಕ ದೌರ್ಜುನ್ಯ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.
ಇಂದಿಗೆ SIT ಕಸ್ಟಡಿ ಅಂತ್ಯವಾಗಿದ್ದರಿಂದ ಆರೋಪಿ ಪ್ರಜ್ವಲ್ ರೇವಣ್ಣನನ್ನು ಬೆಂಗಳೂರಿನ 42 ನೇ ACMM ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಜೂ.24ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಹೀಗಾಗಿ ಇಷ್ಟು ದಿನ SIT ವಶದಲ್ಲಿದ್ದ ಪ್ರಜ್ವಲ್ ರೇವಣ್ಣ ಇಂದಿನಿಂದ ಪರಪ್ಪನ ಅಗ್ರಹಾರ ಜೈಲು ಸೇರಲಿದ್ದಾರೆ.
ಇನ್ನು ಆರೋಪಿ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಕೇಸ್ ನಲ್ಲಿ SIT ಇಂದು ಬೆಂಗಳೂರಿನ ಬಸವನಗುಡಿಯ ನಿವಾಸದಲ್ಲಿ ಸ್ಥಳ ಮಹಜರನ್ನೂ ಮಾಡಿ, ತನಿಖಾಧಿಕಾರಿಗಳು ಮನೆಯಲ್ಲಿ ಕೆಲ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡು ಕೆಲ ಮಹತ್ವದ ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ.
ತನಿಖೆಗೆ ಸಹಾಯಕಾರಿಯಾಗುವಂತೆ ಕಂಪ್ಯೂಟರ್ ಜೊತೆ ಮಹಜರಿಗೆ ತೆರಳಿದ ಅಧಿಕಾರಿಗಳು, ಮಹಜರು ವೇಳೆ ಆರೋಪಿಯ ಹೇಳಿಕೆಯನ್ನು ಕಂಪ್ಯೂಟರ್ ನಲ್ಲಿ ಟೈಪ್ ಮಾಡಿಕೊಳ್ಳೋ ಮೂಲಕ ದಾಖಲಿಸಿಕೊಂಡಿದ್ದಾರೆ.
ಇನ್ನು ಪ್ರಜ್ವಲ್ನದ್ದು ಎಂದು ಹೇಳಲಾಗ್ತಿರೋ ವೈರಲ್ ಆಗಿರುವ ಸಾಕಷ್ಟು ವಿಡಿಯೋಗಳಲ್ಲಿ ಎಲ್ಲೂ ಕೂಡ ಪ್ರಜ್ವಲ್ ಮುಖ ಕಾಣಿಸದೆ ಇರೋದ್ರಿಂದ, ವಿಡಿಯೋದಲ್ಲಿ ಕಾಣಿಸುವ ದೃಶ್ಯ ಮತ್ತು ಮನೆಯ ಗುರುತುಗಳನ್ನು ಅಧಿಕಾರಿಗಳು ಸಾಕ್ಷ್ಯವನ್ನಾಗಿ ಪರಿಗಣಿಸಿ ಆ ಪ್ರಕಾರವಾಗಿ ತಾಳೆ ಹಾಕುತ್ತಿದ್ದಾರೆ.
ಇನ್ನು ಸದ್ಯಕ್ಕೆ ಆರೋಪಿ ಪ್ರಜ್ವಲ್ ರೇವಣ್ಣ ಪರಪ್ಪನ ಅಗ್ರಹಾರ ಜೈಲಿಗೆ ಎಂಟ್ರಿಯಾಗಿದ್ದು, ಈತನ ಮೇಲಿನ ಪ್ರಕರಣಗಳಲ್ಲಿ ಮತ್ತಷ್ಟು ಸ್ಫೋಟಕ ವಿಚಾರಗಳು ಹೊರಬರುವ ಸಾಧ್ಯತೆಗಳಿವೆ.