ADVERTISEMENT
ಪ್ರಧಾನಿ ಮೋದಿ ಸರ್ಕಾರದ ಅವಧಿಯಲ್ಲಿ ಸಂಭವಿಸಿರುವ 7 ಭೀಕರ ರೈಲು ಅಪಘಾತಗಳ ಪಟ್ಟಿಯನ್ನು ಮುಂದಿಟ್ಟಿರುವ ಕಾಂಗ್ರೆಸ್ ಈ ದುರಂತಗಳಿಗೆ ಯಾರು ಹೊಣೆ ಎಂದು ಪ್ರಶ್ನಿಸಿದೆ.
ಮೋದಿ ಸರ್ಕಾರ ಅವಧಿಯಲ್ಲಿ ಭೀಕರ ರೈಲು ಅಪಘಾತಗಳು:
ಮೇ 26, 2014ರಲ್ಲಿ ಗೋರಖ್ಧಾಮ್ ಎಕ್ಸ್ಪ್ರೆಸ್ ಅಪಘಾತ , 25 ಮಂದಿ ಸಾವು, 50 ಮಂದಿಗೆ ಗಾಯ
2016ರ ನವೆಂಬರ್ನಲ್ಲಿ ಇಂದೋರ್-ಪಾಟ್ನಾ ಎಕ್ಸ್ಪ್ರೆಸ್ ಅಪಘಾತ, 150 ಮಂದಿ ಸಾವು, 150 ಮಂದಿಗೆ ಗಾಯ
2017ರ ಆಗಸ್ಟ್ 23ರಂದು ಕೌಫಿಯಾತ್ ಎಕ್ಸ್ಪ್ರೆಸ್ ಅಪಘಾತ – 70 ಮಂದಿ ಗಾಯ
2017ರ ಆಗಸ್ಟ್ 18ರಲ್ಲಿ ಪುರಿ-ಹರಿದ್ವಾರ ಎಕ್ಸ್ಪ್ರೆಸ್ ಅಪಘಾತ, 23 ಮಂದಿ ಸಾವು, 60 ಮಂದಿಗೆ ಗಾಯ
2022ರ ಜನವರಿ 13ರಂದು ಬಿಕನೇರ್-ಗುವಾಹಟಿ ಎಕ್ಸ್ಪ್ರೆಸ್ ಅಪಘಾತ, 9 ಮಂದಿ ಸಾವು, 36 ಮಂದಿಗೆ ಗಾಯ
ಜೂನ್ 2, 2023ರಲ್ಲಿ ಬಾಲಸೋರ್ ರೈಲು ಅಪಘಾತ, 296 ಮಂದಿ ಸಾವು, 900 ಮಂದಿಗೆ ಗಾಯ
ಜೂನ್ 17, 2024ರಲ್ಲಿ ಕಾಂಚನಗಂಗಾ ಎಕ್ಸ್ಪ್ರೆಸ್ ಅಪಘಾತ , 8 ಮಂದಿ ಸಾವು, 25 ಮಂದಿಗೆ ಗಾಯ
2014ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ 64 ರೈಲು ಅಪಘಾತಗಳು ಸಂಭವಿಸಿದೆ. ಇವುಗಳಲ್ಲಿ 24 ಅಪಘಾತಗಳಲ್ಲಿ ಜೀವಹಾನಿಯಾಗಿದ್ದು, 740 ಮಂದಿ ಮೃತಪಟ್ಟಿದ್ದಾರೆ.
ಈ ಪೈಕಿ 2 ಅಪಘಾತಗಳಲ್ಲಿ 50ಕ್ಕೂ ಅಧಿಕ ಪ್ರಯಾಣಿಕರು ಬಲಿಯಾಗಿದ್ದರೆ, 1 ಅಪಘಾತದಲ್ಲಿ 152 ಮಂದಿ ಮತ್ತು ಕಳೆದ ವರ್ಷ ಸಂಭವಿಸಿದ್ದ ಬಾಲಸೋರ್ ರೈಲು ಅಪಘಾತದಲ್ಲಿ 296 ಮಂದಿ ಬಲಿಯಾಗಿದ್ದಾರೆ.
2021ರಿಂದ ಅಶ್ವಿನಿ ವೈಷ್ಣವ್ ಅವರೇ ಮೋದಿ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿದ್ದಾರೆ. ಕಾಂಗ್ರೆಸ್ ಮತ್ತು ಆರ್ಜೆಡಿ ಒಳಗೊಂಡಂತೆ ವಿಪಕ್ಷಗಳು ರೈಲ್ವೆ ಸಚಿವರ ರಾಜೀನಾಮೆಗೆ ಆಗ್ರಹಿಸಿವೆ.
ADVERTISEMENT