No Result
View All Result
ಕರ್ನಾಟಕವೂ ಒಳಗೊಂಡಂತೆ 8 ರಾಜ್ಯಗಳಲ್ಲಿ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಆಗಿರುವ ಹಿನ್ನಡೆಯ ಬಗ್ಗೆ ಸತ್ಯ ಶೋಧನೆ ನಡೆಸಲು ಕಾಂಗ್ರೆಸ್ ಸಮಿತಿಗಳನ್ನು ರಚಿಸಿದೆ.
ಕರ್ನಾಟಕದಲ್ಲಿ ಆಗಿರುವ ಹಿನ್ನಡೆಯ ಸತ್ಯ ಶೋಧನೆ ಮಾಡಲು ಕರ್ನಾಟಕಕ್ಕೆ ಈ ಹಿಂದೆ ಉಸ್ತುವಾರಿ ಆಗಿದ್ದ ಮಧುಸೂದನ್ ಮಿಸ್ತ್ರಿ, ಅಸ್ಸಾಂ ಕಾಂಗ್ರೆಸ್ನ ಯುವ ನಾಯಕ ತರುಣ್ ಗಗೋಯ್ ಮತ್ತು ಹಿಬಿ ಎಡೆನ್ ಅವರ ತಂಡವನ್ನು ರಚಿಸಿದೆ.
ಮಧ್ಯಪ್ರದೇಶ:
ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಪ್ರಥ್ವಿರಾಜ್ ಚವ್ಹಾಣ್, ಸಪ್ತಗಿರಿ ಉಲಾಕಾ ಮತ್ತು ಜಿಗ್ನೇಶ್ ಮೆವಾನಿ
ಛತ್ತೀಸ್ಗಢ:
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮತ್ತು ಹರೀಶ್ ಚೌಧರಿ
ಒಡಿಶಾ:
ದೆಹಲಿ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಅಜಯ್ ಮಕೇನ್ ಮತ್ತು ತಾರಿಖ್ ಅನ್ವರ್
ದೆಹಲಿ, ಉತ್ತರಾಖಂಡ್, ಹಿಮಾಚಲಪ್ರದೇಶ:
ಪಿ ಎಲ್ ಪೂನಿಯಾ ಮತ್ತು ರಜನಿ ಪಾಟೀಲ್
ತೆಲಂಗಾಣ:
ಪಿ ಜೆ ಕುರಿಯನ್, ರಖಿಬುಲ್ ಹುಸೈನ್ ಮತ್ತು ಪರ್ಗಾತ್ ಸಿಂಗ್
ಕರ್ನಾಟಕದಲ್ಲಿ ಕಾಂಗ್ರೆಸ್ 9 ಕ್ಷೇತ್ರಗಳನ್ನು ಗೆದ್ದಿದೆ. 2019ಕ್ಕೆ ಹೋಲಿಸಿದ್ರೆ 8 ಸೀಟು ಹೆಚ್ಚಳವಾಗಿದ್ದರೂ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೊಂಡಂತೆ ಎರಡಂಕಿ ದಾಟಿಲ್ಲ.
ಮಧ್ಯಪ್ರದೇಶ, ದೆಹಲಿ, ಒಡಿಶಾ, ಹಿಮಾಚಲಪ್ರದೇಶ, ಉತ್ತರಾಖಂಡ್ನಲ್ಲಿ ಕಾಂಗ್ರೆಸ್ ಒಂದೇ ಒಂದು ಸೀಟು ಗೆದ್ದಿಲ್ಲ.
ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ ಗೆದ್ದಿದ್ದು 8 ಸೀಟು ಮತ್ತು ಬಿಜೆಪಿಯೂ 8 ಸೀಟು ಗೆದ್ದಿತ್ತು.
No Result
View All Result
error: Content is protected !!