ತಮಿಳುನಾಡು ರಾಜ್ಯದ ಕಲ್ಲಕುರಿಚಿಯಲ್ಲಿ ಸಂಭವಿಸಿರುವ ಕಳ್ಳಭಟ್ಟಿ ದುರಂತದಲ್ಲಿ ಸತ್ತವರ ಸಂಖ್ಯೆ 34ಕ್ಕೆ ಏರಿದೆ. ಮೃತರಲ್ಲಿ ಇಬ್ಬರು ಮಹಿಳೆಯರೂ ಸೇರಿದ್ದಾರೆ.
ಕುರುಣಾಪುರಂನಲ್ಲಿ ಸಂಭವಿಸಿರುವ ಈ ಅವಘಡದಲ್ಲಿ ಮೃತರಲ್ಲಿ ಒಬ್ಬರು ಲೈಂಗಿಕ ಅಲ್ಪಸಂಖ್ಯಾತೆ ಕೂಡಾ ಸೇರಿದ್ದಾರೆ.
90 ಮಂದಿ ಅಸ್ವಸ್ತರಾಗಿದ್ದು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 10 ಮಂದಿ ಸ್ಥಿತಿ ಗಂಭೀರವಾಗಿದೆ.
ಪ್ರಕರಣದ ತನಿಖೆಯನ್ನು ತಮಿಳುನಾಡು ಸರ್ಕಾರ ಸಿಬಿ-ಸಿಐಡಿಗೆ ಒಪ್ಪಿಸಿದೆ.
ಸಚಿವ ಉದಯನಿಧಿ ಸ್ಟಾಲಿನ್ ಅವರು ಕೆಲವೇ ಹೊತ್ತಲ್ಲಿ ಕಲ್ಲಕುರಿಚಿಗೆ ಭೇಟಿ ನೀಡಲಿದ್ದಾರೆ.
ADVERTISEMENT
ADVERTISEMENT