ADVERTISEMENT
ಹಾವೇರಿ ಜಿಲ್ಲೆಯ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಸಂಸದರಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಯ್ಕೆ ಆದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಅವರು ಪ್ರತಿನಿದಿಸ್ತಿದ್ದ ಕ್ಷೇತ್ರಕ್ಕೆ ಅವರ ಮಗ ಭರತ್ ಬೊಮ್ಮಾಯಿ ಅವರಿಗೆ ಬಿಜೆಪಿ ಉಪ ಚುನಾವಣೆಯಲ್ಲಿ ಟಿಕೆಟ್ ನೀಡಿದೆ.
ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸ್ತಿರುವ ತಮ್ಮ ಮಗನನ್ನು ಗೆಲ್ಲಿಸುವ ಸಲುವಾಗಿ ಬಸವರಾಜ ಬೊಮ್ಮಾಯಿ ಅವರು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಈ ನಡುವೆ ಬೊಮ್ಮಾಯಿ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊAಡಿರುವ ವೀಡಿಯೋ ಬೊಮ್ಮಾಯಿ ಅವರು ಕ್ಷೇತ್ರದಲ್ಲಿ ಏನ್ ಕೆಲಸ ಮಾಡಿದ್ದಾರೆ ಎಂಬ ಪ್ರಶ್ನೆ ಕೇಳುವಂತೆ ಮಾಡಿದೆ.
ಮಕ್ಕಳಿರಲವ್ವ ಮನೆತುಂಬಾ- ಮಕ್ಕಳೊಂದಿಗೆ ಬೆರೆಯುವುದು ನನ್ನ ನೆಚ್ಚಿನ ಹವ್ಯಾಸಗಳಲ್ಲಿ ಒಂದು. ಬಿಡುವಿಲ್ಲದ ಚುನಾವಣಾ ಪ್ರಚಾರದ ನಡುವೆ ಇಂದು ನಮ್ಮ ಶಿಗ್ಗಾಂವಿಯ ಮಕ್ಕಳೊಂದಿಗೆ ಬೆರೆಯುವ ಅವಕಾಶ ದೊರೆಯಿತು. ಮಕ್ಕಳೊಂದಿಗೆ ಬೆರೆತು ಮನಸ್ಸನ್ನು ಹಗುರಾಗಿಸಿಕೊಂಡೆ.
ಎAದು ಟಿಪ್ಪಣಿಯನ್ನು ಬರೆದು ಬೊಮ್ಮಾಯಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ವೀಡಿಯೋಯವನ್ನು ಹಂಚಿಕೊAಡಿದ್ದಾರೆ.
ಆ ವೀಡಿಯೋದಲ್ಲಿ ಶಾಲಾ ಮಕ್ಕಳೊಂದಿಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಡೆಸಿರುವ ಸಂವಾದ ಹೀಗಿದೆ.
ಶಾಲಾ ಮಕ್ಕಳು: ಗೌರ್ಮೆಂಟ್ ರೀ (ಶಾಲೆ)
ಬಸವರಾಜ ಬೊಮ್ಮಾಯಿ: ನಿಂದೂ ಗೌರ್ಮೆಂಟಾ..?
ಶಾಲಾ ಮಕ್ಕಳು: ಹ್ಞಾ…ರೀ..
ಬಸವರಾಜ ಬೊಮ್ಮಾಯಿ: ನೀವು ಯಾವ್ ಕ್ಲಾಸೆಲ್ಲಾ..?
ಶಾಲಾ ವಿದ್ಯಾರ್ಥಿಗಳು: ನೈಂತ್…
ಬಸವರಾಜ ಬೊಮ್ಮಾಯಿ: ಬಸ್ಗೆ ಕಾಯ್ತಿದ್ದಿರೇನು..?
ಶಾಲಾ ಮಕ್ಕಳು: ಇಲ್ಲಾರೀ, ಬಸ್ ಇಲ್ಲಾರೀ..ನಡ್ಕೊಂತ್ತಾ ಹೋಗ್ಬೇಕು…
ಬಸವರಾಜ ಬೊಮ್ಮಾಯಿ: ಎಷ್ಟು ಕಿಲೋ ಮೀಟರ್..? ಒಂದ್ ಕಿಲೋ ಮೀಟರಾ..?
ಶಾಲಾ ಮಕ್ಕಳು: 3 ಕಿಲೋ ಮೀಟರ್…!
ಬಸವರಾಜ ಬೊಮ್ಮಾಯಿ ಸೀಟಿನ ಹಿಂದೆ ಕೂತಿದ್ದವ: ಭಾರೀ ವಾಕ್ ಆಗುತ್ತೆ..!
ಬಸವರಾಜ ಬೊಮ್ಮಾಯಿ: ಚಲೋ ವಾಕ್ ಆಗುತ್ತೆ..ಚಲೋ ಆಗುತ್ತೆ ಹೆಲ್ತ್ ಚಲೋ ಆಗುತ್ತೆ..ನಾನೂ 3 ಕಿಲೋ ಮೀಟರ್ ನಡೆದು ಶಾಲೆಗೆ ಹೋಗೀನಿ…ಓಕೆ, ರೈಟ್ ಆಲ್ ದಿ ಬೆಸ್ಟ್ ಚೆನ್ನಾಗಿ ಓದ್ಬೇಕು..ರೈಟ್ ಆಲ್ ದಿ ಬೆಸ್ಟ್..ಬಾಯ್..ಬಾಯ್..!
ಇಷ್ಟು ಮಾತಾಡಿ ಬಸವರಾಜ ಬೊಮ್ಮಾಯಿ ತಮ್ಮ ಕಾರಲ್ಲಿ ಮುಂದಕ್ಕೆ ಹೋದರು.
ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 4 ಚುನಾವಣೆಗಳಲ್ಲಿ ಸತತವಾಗಿ ಗೆದ್ದಿರುವ, ಜೊತೆಗೆ ಇದೇ ಕ್ಷೇತ್ರವನ್ನು ಪ್ರತಿನಿಧಿಸಿದ್ದಾಗ ಕಳೆದ ಅವಧಿಯಲ್ಲಿ ಮುಖ್ಯಮಂತ್ರಿಯೂ ಆಗಿದ್ದ ಬಸವರಾಜ ಬೊಮ್ಮಾಯಿ ಅವರಿಗೆ ಬಸ್ ಇಲ್ಲಾರೀ, 3 ಕಿಲೋ ಮೀಟರ್ ನಡೆದುಕೊಂಡೇ ಹೋಗ್ಬೇಕು ಎಂದು ಶಾಲಾ ಮಕ್ಕಳು ಹೇಳಿದ್ದು ತಮಾಷೆಯ ವಿಷಯವಾಗಿ ಕಂಡಿದ್ದು ವಿಚಿತ್ರ. ಜೊತೆಗೆ 19 ವರ್ಷಗಳಿಂದ ಈ ಕ್ಷೇತ್ರದ ಶಾಸಕರಾಗಿ ಬೊಮ್ಮಾಯಿ ಮಾಡಿರುವ ಎಷ್ಟು ಕೆಲಸ ಮಾಡಿದ್ದಾರೆ ಎನ್ನುವುದಕ್ಕೆ ಇದೂ ಒಂದು ಉದಾಹರಣೆ. ಕ್ಷೇತ್ರದ ಮಾಜಿ ಶಾಸಕರು, ಕ್ಷೇತ್ರದ ಸಂಸದರೂ, ಮಾಜಿ ಮುಖ್ಯಮಂತ್ರಿಗಳೇ ತಮ್ಮ ಕಣ್ಣೆದುರು ಸಿಕ್ಕಾಗ ಬಸ್ ಸಮಸ್ಯೆ ಹೇಳಿಕೊಂಡ ಮಕ್ಕಳು `ಕಾಮನ್ಮ್ಯಾನ್ ಸಿಎಂ’ ಆಗಿದ್ದ ಬೊಮ್ಮಾಯಿ ಏನಾದ್ರೂ ಭರವಸೆ ಕೊಟ್ಟಾರು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಮಕ್ಕಳೊಂದಿಗೆ ಬೆರೆತು ಮನಸ್ಸನ್ನು ಹಗುರವಾಗಿಸಿಕೊಂಡ `ಕಾಮನ್ಮ್ಯಾನ್’ ಎಂದು ಕರೆಸಿಕೊಳ್ಳುತ್ತಿದ್ದ ಬೊಮ್ಮಾಯಿ ಆ ಮಕ್ಕಳ ಮನಸ್ಸನ್ನು ಹಗುರ ಮಾಡಲೇ ಇಲ್ಲ. ಬೊಮ್ಮಾಯಿ ಕಾರಿನಲ್ಲೇ ಮುಂದಕ್ಕೆ ಚಲಿಸಿದಾಗ ಆ ಮಕ್ಕಳ ಕಣ್ಣುಗಳಲ್ಲಿ ನಿರಾಸೆ ಉಳಿದಿದ್ದು ಸ್ಪಷ್ಟವಾಗಿ ಕಾಣಿಸಿತು.
ADVERTISEMENT