ಭಾರತದ ಮೇಲೆ ಪ್ರತಿಕೂಲ ತೆರಿಗೆಯನ್ನು ವಿಧಿಸುವುದಾಗಿ ಅಮೆರಿಕದ ಚುನಾಯಿತ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಆಯ್ಕೆ ಆದ ಬಳಿಕ ಇದೇ ಮೊದಲ ಬಾರಿಗೆ ಬಹಿರಂಗ ಬೆದರಿಕೆ ಹಾಕಿದ್ದಾರೆ.
ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗುವ ಕೆಲವು ಉತ್ಪನ್ನಗಳ ಮೇಲೆ ಭಾರತ ಮತ್ತು ಬ್ರೆಜಿಲ್ ಅಧಿಕ ಸುಂಕವನ್ನು ವಿಧಿಸುತ್ತಿವೆ. ಆ ದೇಶಗಳ ಮೇಲೆ ಉತ್ಪನ್ನಗಳ ಮೇಲೆ ಪ್ರತಿಕೂಲ ತೆರಿಗೆಯನ್ನು ವಿಧಿಸಲಾಗುತ್ತದೆ ಎಂದು ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ.
ʻಪ್ರತಿಕೂಲ. ಒಂದು ವೇಳೆ ಅವರು ನಮ್ಮ ಮೇಲೆ ತೆರಿಗೆ ವಿಧಿಸಿದರೆ, ನಾವು ಅಷ್ಟೇ ತೆರಿಗೆಯನ್ನು ಅವರ ಮೇಲೆ ವಿಧಿಸುತ್ತೇವೆ. ಅವರು ನಮ್ಮ ಮೇಲೆ ತೆರಿಗೆ ವಿಧಿಸ್ತಿದ್ದಾರೆ. ನಾವು ಅವರ ಮೇಲೆ ತೆರಿಗೆ ವಿಧಿಸ್ತೇವೆ. ಬಹುತೇಕ ಎಲ್ಲ ಪ್ರಕರಣಗಳಲ್ಲೂ ಅವರು ನಮ್ಮ ಮೇಲೆ ತೆರಿಗೆ ವಿಧಿಸ್ತಿದ್ದಾರೆ ಮತ್ತು ನಾವು ಅವರ ಮೇಲೆ ತೆರಿಗೆ ವಿಧಿಸ್ತಿಲ್ಲ.
ʻಪ್ರತಿಕೂಲ ಎಂಬ ಪದ ಮುಖ್ಯ ಏಕೆಂದರೆ ಒಂದು ವೇಳೆ ಅವರು ನಮ್ಮ ಮೇಲೆ ಸುಂಕ ವಿಧಿಸಿದರೆ, ಒಂದು ವೇಳೆ ಭಾರತ ನಮ್ಮ ಮೇಲೆ ಶೇಕಡಾ 100ರಷ್ಟು ತೆರಿಗೆ ವಿಧಿಸಿದರೆ ನಾವು ಅವರ ಮೇಲೆ ಏನೂ ತೆರಿಗೆ ವಿಧಿಸಬಾರದಾ..? ನಿಮಗೆ ಗೊತ್ತಾ, ಅವರು ನಮಗೆ ಸೈಕಲ್ ರಫ್ತು ಮಾಡ್ತಾರೆ, ನಾವು ಅವರಿಗೆ ಸೈಕಲ್ ರಫ್ತು ಮಾಡ್ತೇವೆ, ನಮ್ಮ ಮೇಲೆ ಶೇಕಡಾ 100ರಿಂದ 200ರಷ್ಟು ತೆರಿಗೆ ವಿಧಿಸ್ತಾರೆ. ಭಾರತ ಅಧಿಕ ತೆರಿಗೆಯನ್ನು ವಿಧಿಸುತ್ತಿದೆ. ಬ್ರೆಜಿಲ್ ಕೂಡಾ ಅಧಿಕ ತೆರಿಗೆಯನ್ನು ವಿಧಿಸುತ್ತಿದೆ. ನಮ್ಮ ಮೇಲೆ ತೆರಿಗೆ ವಿಧಿಸಬೇಕು ಎಂದು ಅವರು ಬಯಸಿದ್ದರೆ, ಒಳ್ಳೆದು, ನಾವು ಕೂಡಾ ಅಷ್ಟೇ ಪ್ರಮಾಣದಲ್ಲಿ ಅವರ ಮೇಲೆ ತೆರಿಗೆ ವಿಧಿಸ್ತೇವೆʼ
ಎಂದು ಫ್ಲೋರಿಡಾದಲ್ಲಿ ಅಮೆರಿಕದ ಚುನಾಯಿತ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ.
ನವೆಂಬರ್ ತಿಂಗಳ ರಫ್ತು ಅಂಕಿ ಅಂಶದ ಪ್ರಕಾರ ಭಾರತದ ಒಟ್ಟು ರಫ್ತಿನಲ್ಲಿ ಅಮೆರಿಕಕ್ಕೆ ಆಗುತ್ತಿರುವ ರಫ್ತಿನ ಪಾಲು ಶೇಕಡಾ 2.5ಕ್ಕೆ ಇಳಿಕೆಯಾಗಿದೆ. ಏಪ್ರಿಲ್-ನವೆಂಬರ್ ಅವಧಿಯಲ್ಲಿ ಕಳೆದ ವರ್ಷ ಭಾರತದ ಒಟ್ಟು ರಫ್ತಿನಲ್ಲಿ ಅಮೆರಿಕಕ್ಕೆ ಆಗುತ್ತಿರುವ ರಫ್ತಿನ ಪಾಲು ಶೇಕಡಾ 5.3ರಷ್ಟಿತ್ತು.
ADVERTISEMENT
ADVERTISEMENT