ADVERTISEMENT
ಜಾತಿ ಆಧಾರಿತ ಮೀಸಲಾತಿಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ವಿರೋಧ ವ್ಯಕ್ತಪಡಿಸಿದ್ದು, ಮೀಸಲಾತಿ ಸಂಬಂಧ ಮಾನದಂಡವನ್ನೇ ಬದಲಾಯಿಸುವಂತೆ ಆಗ್ರಹಿಸಿದ್ದಾರೆ.
ಭಾರತದ ಸಂವಿಧಾನಕ್ಕೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಂಸತ್ತಿನ ಮೇಲ್ಮನೆಯಲ್ಲಿ ಮಾಡಿದ ಭಾಷಣದಲ್ಲಿ ಬಿಜೆಪಿ ಮಿತ್ರ ಪಕ್ಷವಾಗಿರುವ ಜೆಡಿಎಸ್ ವರಿಷ್ಠ ದೇವೇಗೌಡ ಅವರು ಮೀಸಲಾತಿ ಬದಲಾವಣೆ ಬಗ್ಗೆ ಸಲಹೆ ನೀಡಿದ್ದಾರೆ.
ʻಈ ಹಿಂದೆಯೇ ಮೀಸಲಾತಿ ನೀಡಲಾಗಿದ್ದರೂ ಜನ ಬಳಲುತ್ತಿದ್ದಾರೆ. ಮೀಸಲಾತಿ ಜನರನ್ನು ಮೇಲಕ್ಕೆತ್ತಿಲ್ಲ. ಮೀಸಲಾತಿ ಹೊರತಾಗಿಯೂ ಜನ ಎರಡು ಹೊತ್ತಿನ ಊಟಕ್ಕೆ ಪರದಾಡುತ್ತಿದ್ದಾರೆ. ಮೀಸಲಾತಿ ಸಂಬಂಧ ಹಿಂದೆ ಏನಾಗಿದೆ ಎಂಬ ಬಗ್ಗೆ ಸದನ ಆಲೋಚನೆ ಮಾಡ್ಬೇಕು ಮತ್ತು ಈ ದೇಶದಲ್ಲಿ ಬಡತನದ ಆಧಾರದಲ್ಲಷ್ಟೇ ಮೀಸಲಾತಿ ನೀಡಬಹುದೇ ಎಂಬ ಬಗ್ಗೆ ಯೋಚಿಸಬೇಕು. ಈ ಹಿಂದಿನ ರೀತಿಯಲ್ಲೇ (ಜಾತಿ ಆಧಾರಿತ) ಮೀಸಲಾತಿಯನ್ನು ಮುಂದುವರೆಸಬೇಕೇ ಅಥವಾ ಅತ್ಯಂತ ಬಡತನದಿಂದ ಬಳಲುತ್ತಿರುವವರಿಗೆ ಮಾತ್ರ ಮತ್ತು ಕೆಟ್ಟ ಸ್ಥಿತಿಯಲ್ಲಿರುವವರಿಗೆ ಮಾತ್ರ ಮೀಸಲಾತಿ ನೀಡಬೇಕೇ ಎಂಬ ಬಗ್ಗೆ ಆಲೋಚಿಸಬೇಕು. ಒಂದು ವೇಳೆ ಈ ಬಗ್ಗೆ ಸದನ ಆಲೋಚಿಸಿದ್ರೆ, ನಾಯಕರು ಆಲೋಚಿಸಿದ್ರೆ, ಮೀಸಲಾತಿ ಸಂಬಂಧ ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಪ್ರಧಾನಿ ನರೇಂದ್ರ ಮೋದಿಯವರೂ ಆಲೋಚಿಸಬಹುದುʼ
ಎಂದು ದೇವೇಗೌಡರು ಹೇಳಿದ್ದಾರೆ.
ಈ ಮೂಲಕ ಜಾತಿಗಳ ಆಧಾರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ಸಮುದಾಯಗಳಿಗೆ ನೀಡುತ್ತಿರುವ ಮೀಸಲಾತಿಗೆ ದೇವೇಗೌಡರು ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದ್ದಾರೆ.
ADVERTISEMENT