ADVERTISEMENT
ಮೂರು ದಿನಗಳಲ್ಲಿ ಭಾರತದ ಷೇರು ಮಾರುಕಟ್ಟೆ 2 ಸಾವಿರ ಅಂಕಗಳಷ್ಟು ಕುಸಿದಿದೆ.
ಸತತ ಮೂರು ದಿನ ಷೇರು ವ್ಯವಹಾರದಲ್ಲಿ ಆಗಿರುವ ಈ ಕುಸಿತ ಕಾರಣದಿಂದ ಷೇರುದಾರರು 6 ಲಕ್ಷ ಕೋಟಿ ರೂಪಾಯಿಯಷ್ಟು ನಷ್ಟ ಅನುಭವಿಸಿದ್ದಾರೆ. ಮೂರು ದಿನಗಳ ಕುಸಿತದ ಹಿನ್ನೆಲೆಯಲ್ಲಿ ಡಿಸೆಂಬರ್ 13ರಂದು 459 ಲಕ್ಷ ಕೋಟಿ ರೂಪಾಯಿಯಷ್ಟಿದ್ದ ಕಂಪನಿಗಳ ಒಟ್ಟು ಬಂಡವಾಳ 453 ಲಕ್ಷ ಕೋಟಿ ರೂಪಾಯಿಗೆ ಇಳಿಕೆಯಾಗಿದೆ.
ಇವತ್ತು ಅಂದರೆ ಡಿಸೆಂಬರ್ 18ರಂದು ಬಿಎಸ್ಇ ಸೂಚ್ಯಂಕ 502 ಅಂಕಗಳಷ್ಟು, ನಿಫ್ಟಿ 50 ಸೂಚ್ಯಂಕ 137 ಅಂಕಗಳಷ್ಟು ಇಳಿಕೆಯಾಗಿತ್ತು. ಮೂರು ದಿನಗಳಲ್ಲಿ ಬಿಎಸ್ಇ ಸೂಚ್ಯಂಕ 1,951 ಅಂಕಗಳಷ್ಟು ಕುಸಿತವಾಗಿದೆ.
ಷೇರು ಮಾರುಕಟ್ಟೆ ಮಾತ್ರವಲ್ಲ ಡಾಲರ್ ಎದುರು ರೂಪಾಯಿ ಮೌಲ್ಯ ಕೂಡಾ ದಾಖಲೆ ಕುಸಿತ ಕಂಡಿದೆ. 1 ಡಾಲರ್ ಎದುರು ರೂಪಾಯಿ ಮೌಲ್ಯ 84 ರೂಪಾಯಿ 95 ಪೈಸೆಗೆ ಇಳಿಕೆಯಾಗಿದೆ.
ADVERTISEMENT