ಭಾರತೀಯ ನೌಕಾ ಸೇನೆಗೆ ಸೇರಿದ ದೋಣಿ ನಿಯಂತ್ರಣ ಕಳೆದುಕೊಂಡು ಪ್ರವಾಸಿಗರಿದ್ದ ಹಡಗಿಗೆ ಡಿಕ್ಕಿ ಹೊಡೆದ ಪರಿಣಾಮ 13 ಮಂದಿ ಸಾವನ್ನಪ್ಪಿದ್ದಾರೆ. ಮುಂಬೈ ಕರಾವಳಿಯಲ್ಲಿ ಈ ದುರಂತ ಸಂಭವಿಸಿದೆ.
ADVERTISEMENT
ನೌಕಾ ಸೇನೆಗೆ ಸೇರಿದ ಸ್ಪೀಡ್ಬೋಟ್ನ ಇಂಜಿನ್ ಪರೀಕ್ಷೆಯ ಸಂದರ್ಭದಲ್ಲಿ ಸ್ಪೀಡ್ಬೋಟ್ ಪ್ರವಾಸಿಗರು ಪ್ರಯಾಣಿಸ್ತಿದ್ದ ಹಡಗಿಗೆ ಡಿಕ್ಕಿ ಹೊಡೆದಿದೆ.
ಈ ಅಪಘಾತದಲ್ಲಿ ಹಡಗಿನಲ್ಲಿದ್ದ 10 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ.
ನೌಕಾ ಸೇನೆ ಅಧಿಕಾರಿ ಮತ್ತು ಇಂಜಿನ್ ತಯಾರಕ ಕಂಪನಿಗೆ ಸೇರಿದ ಇಬ್ಬರು ಮೃತಪಟ್ಟಿದ್ದಾರೆ. ಹಡಗಿನಲ್ಲಿ 102 ಮಂದಿ ಪ್ರಯಾಣಿಸ್ತಿದ್ದರು. ನೌಕಾ ಸೇನೆಯ ಸ್ಪೀಡ್ಬೋಟ್ನಲ್ಲಿ ಐವರಿದ್ದರು.
ಸಂಜೆ 4 ಗಂಟೆ ಸುಮಾರಿಗೆ ನೀಲ್ ಕಮಾಲ್ ಹೆಸರಿನ ಹಡಗಿಗೆ ನೌಕಾ ಸೇನೆಯ ಬೋಟ್ ಡಿಕ್ಕಿ ಹೊಡೆದಿದೆ.
ಈ ಹಡಗಿನಲ್ಲಿ ಪ್ರವಾಸಿಗರನ್ನು ಗೇಟ್ ವೇ ಆಫ್ ಇಂಡಿಯಾದಿಂದ ಎಲಿಫೆಂಟಾ ದ್ವೀಪಕ್ಕೆ ಕರೆದುಕೊಂಡು ಹೋಗಲಾಗ್ತಿತ್ತು.
ಅಪಘಾತದ ಎರಡು ಗಂಟೆಯ ಬಳಿಕ ಸ್ಪೀಡ್ ಬೋಟ್ ಹಡಗಿಗೆ ಡಿಕ್ಕಿ ಹೊಡೆದ ವೀಡಿಯೋ ಬಹಿರಂಗವಾಗಿದೆ.
ADVERTISEMENT