ಹಿಂದೂ ಸನ್ಯಾಸಿ ಚಿನ್ಮಯಿ ಕೃಷ್ಣದಾಸ್ ಅವರಿಗೆ ಬಾಂಗ್ಲಾದೇಶದ ನ್ಯಾಯಾಲಯ (Bangladesh Court )ಜಾಮೀನು ನಿರಾಕರಿಸಿದೆ. ದೇಶದ್ರೋಹದ ಆರೋಪದಡಿಯಲ್ಲಿ ಬಾಂಗ್ಲಾದೇಶ ಸಮ್ಮಿಲಿತ್ ಸನಾತನ ಜಾಗರಣ ಜೊತೆ ಸಂಘಟನೆಯ ವಕ್ತಾರರೂ ಆಗಿರುವ ಚಿನ್ಮಯಿ ಕೃಷ್ಣದಾಸ್ (Hindu Monk Chinmoy Krishna Das) ಅವರನ್ನು ಬಂಧಿಸಲಾಗಿತ್ತು.
ಬಿಗಿಭದ್ರತೆಯಲ್ಲಿ ನಡೆದ 30 ನಿಮಿಷಗಳ ವಿಚಾರಣೆ ವೇಳೆ ಚಟ್ಟೋಗ್ರಾಮ್ ಮೆಟ್ರೋಪಾಲಿಟನ್ ಸೆಷನ್ಸ್ ನ್ಯಾಯಾಧೀಶ ಮೊಹಮ್ಮದ್ ಸೈಫುಲ್ ಇಸ್ಲಾಂ ಅವರು ಜಾಮೀನು ನೀಡುವುದಕ್ಕೆ ನಿರಾಕರಿಸಿದರು.
ಹಿಂದೂ ಸನ್ಯಾಸಿ ಚಿನ್ಮಯಿ ದಾಸ್ ಸಕ್ಕರೆ ಕಾಯಿಲೆ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ಅವರನ್ನು ಸುಳ್ಳು ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ದಾಸ್ ಅವರ ಪರ ವಕೀಲರು ವಾದಿಸಿದರು.
42 ದಿನಗಳಿಂದ ಚಿನ್ಮಯಿದಾಸ್ ಅವರು ಜೈಲಿನಲ್ಲಿದ್ದಾರೆ. ನವೆಂಬರ್ 25ರಂದು ದಾಸ್ ಅವರನ್ನು ಢಾಕಾ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಚಿನ್ಮಯಿ ಕೃಷ್ಣ ದಾಸ್ ಅವರ ಹಾಜರಾಗಿದ್ದ ವಕೀಲರಿಗೆ ಬೆದರಿಕೆ ಹಾಕಲಾಗಿದ್ದ ಹಿನ್ನೆಲೆಯಲ್ಲಿ ಜಾಮೀನು ಅರ್ಜಿಯ ವಿಚಾರಣೆಯನ್ನು ಮುಂದೂಡಲಾಗಿತ್ತು.
ಚಿನ್ಮಯಿದಾಸ್ ಅವರ ವಾದಿಸಲು ವಕೀಲರಿಲ್ಲ ಎಂಬ ಕಾರಣಕ್ಕಾಗಿ ಬಳಿಕ ಡಿಸೆಂಬರ್ 11ರಂದು ಜಾಮೀನು ಅರ್ಜಿಯ ವಿಚಾರಣೆಯನ್ನು ಮುಂದೂಡಲಾಗಿತ್ತು.
ಬಾಂಗ್ಲಾದೇಶದಲ್ಲಿ ಉಂಟಾದ ರಾಜಕೀಯ ಅರಾಜಕತೆ ಬಳಿಕ ಅಕ್ಟೋಬರ್ 25ರಂದು ಚಿತ್ತಾಗಾಂಗ್ನಲ್ಲಿ ಬಾಂಗ್ಲಾದೇಶ ರಾಷ್ಟ್ರಧ್ವಜಕ್ಕಿಂತಲೂ ಎತ್ತರದಲ್ಲಿ ಹಿಂದೂ ಧರ್ಮವನ್ನು ಸಂಕೇತಿಸುವ ಕೇಸರಿ ಧ್ವಜವನ್ನು ಹಾರಿಸುವ ಮೂಲಕ ದೇಶದ್ರೋಹ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಚಿನ್ಮಯಿ ಕೃಷ್ಣದಾಸ್ ಬಂಧನದ ಬಳಿಕ ಚಟ್ಟೋಗ್ರಾಮ ನ್ಯಾಯಾಲಯದ ಅವರಣದಲ್ಲೇ ಚಿನ್ಮಯಿ ಕೃಷ್ಣದಾಸ್ ಅನುಯಾಯಿಗಳ ನಡುವೆ ನವೆಂಬರ್ 27ರಂದು ನಡೆದಿದ್ದ ಹಿಂಸಾಚಾರದಲ್ಲಿ ಓರ್ವ ವಕೀಲ ಕೂಡಾ ಮೃತಪಟ್ಟಿದ್ದರು.
ADVERTISEMENT
ADVERTISEMENT