ಪಿಎಸ್ಐ ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಪ್ರಮುಖ ಕಿಂಗ್ ಪಿನ್ ಆಗಿರುವ ಬಿಜೆಪಿ ಮುಖಂಡೆ ದಿವ್ಯಾ ಹಾಗರಗಿಯವರನ್ನು ಬಂಧಿಸಿದೆ. ಇದೀಗ ಇವರನ್ನು ಭೇಟಿಯಾಗಲು ಬಂದ ಕಲಬುರ್ಗಿಯ ಬಿಜೆಪಿ ಮುಖಂಡೆ ಭೇಟಿಯಾಗದೇ ವಾಪಾಸ್ ಮರಳಿದ್ದಾರೆ.
ಬಂಧನದಲ್ಲಿರುವ ಬಿಜೆಪಿ ನಾಯಕಿ ದಿವ್ಯಾ ಹಾಗರಗಿಯನ್ನು ಭೇಟಿ ಮಾಡಲು ಬಂದಿದ್ದ ಅವರ ಆಪ್ತೆ, ಬಿಜೆಪಿ ಗ್ರಾಮಾಂತರ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾಗೀರಥಿ ಗುನ್ನಾಪುರ ಅವರಿಗೆ ಭೇಟಿ ಮಾಡಲು ಇಂದು ಅವಕಾಶ ಸಿಗಲಿಲ್ಲ.
ಬೆಳಿಗ್ಗೆಯಿಂದಲೇ ಆರೋಪಿಗಳಾದ ದಿವ್ಯಾ ಹಾಗರಗಿ, ರುದ್ರಗೌಡ ಡಿ. ಪಾಟೀಲ, ಮಂಜುನಾಥ ಮೇಳಕುಂದಿ ಹಾಗೂ ಮುಖ್ಯ ಶಿಕ್ಷಕ ಕಾಶಿನಾಥರನ್ನು ಸಿಐಡಿ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ದಿವ್ಯಾ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಬಿಜೆಪಿ ಮುಖಂಡೆ ಭಾಗೀರಥಿಯವರು ವಿಚಾರಣೆ ನಡೆಯತ್ತಿರುವ ಐವಾನ್ ಇ ಶಾಹಿ ಅತಿಥಿ ಗೃಹದ ಆವರಣದಲ್ಲಿ ಕೆಲ ಹೊತ್ತು ಕುಳಿತಿದ್ದರು. ಆದರೆ, ಭೇಟಿಗೆ ಅವಕಾಶ ಸಿಗುವುದಿಲ್ಲ ಎಂದು ಗೊತ್ತಾದ ಬಳಿಕ ವಾಪಸ್ಸಾಗಿದ್ದಾರೆ.