ಹಾಸನ ಜಿಲ್ಲೆಯ ಅರಕಲಗೂಡು ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಚಿವ ಎ ಮಂಜು ಅವರಿಗೆ ಜೆಡಿಎಸ್ ಟಿಕೆಟ್ ಘೋಷಣೆ ಆಗಿದೆ.
ಎ ಮಂಜು ಅವರ ಜೊತೆಗೆ ಮಾತಾಡಿದ್ದೇನೆ. ಅವರು ನಮ್ಮ ಪಕ್ಷಕ್ಕೆ ಬರ್ತಾರೆ. ಅವರಿಗೆ ನಾವು ಟಿಕೆಟ್ ಫೈನಲ್ ಮಾಡ್ತೀವಿ
ಎಂದು ಬೆಂಗಳೂರಲ್ಲಿರುವ ಜೆಡಿಎಸ್ ಪಕ್ಷದ ಮುಖ್ಯ ಕಚೇರಿ ಜೆಪಿ ಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಅರಸೀಕೆರೆಯಿಂದ ಬೇರೆ ಅಭ್ಯರ್ಥಿಗಳಿದ್ದಾರೆ:
ಅರಸೀಕೆರೆಯಲ್ಲಿ ಈ ಬಾರಿ ಹಾಲಿ ಶಾಸಕ ಶಿವಲಿಂಗೇಗೌಡರಿಗೆ ಟಿಕೆಟ್ ಸಿಗಲ್ಲ ಎಂಬ ಸುಳಿವು ನೀಡಿದ್ದಾರೆ ಮಾಜಿ ಸಿಎಂ ಹೆಚ್ಡಿಕೆ.
ಎರಡು ವರ್ಷಗಳಿಂದ ಶಿವಲಿಂಗೇಗೌಡ ಅವರು ಪಕ್ಷದ ಸಭೆಗೆ ಬಂದಿಲ್ಲ. ಅಲ್ಲೂ ಕೂಡಾ ನಮಗೆ ಅಭ್ಯರ್ಥಿಗಳಿದ್ದಾರೆ. ಅರಸೀಕೆರೆಯಲ್ಲಿ ನಮಗೆ ಅಭ್ಯರ್ಥಿಗಳ ಕೊರತೆ ಇಲ್ಲ
ಎಂದು ಮಾಜಿ ಸಿಎಂ ಹೆಚ್ಡಿಕೆ ಹೇಳಿದ್ದಾರೆ.
ADVERTISEMENT
ADVERTISEMENT