ಸಣ್ಣ ಉಳಿತಾಯ ಯೋಜನೆಗಳಿಗೆ ಆಧಾರ್ ಮತ್ತು ಪ್ಯಾನ್ ಕಾರ್ಡ್ ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಇವತ್ತಿನಿಂದಲೇ ಅನ್ವಯ ಆಗುವಂತೆ ಮಾರ್ಚ್ 31ರಂದು ಕೇಂದ್ರ ಹಣಕಾಸು ಸಚಿವಾಲಯ ಸುತ್ತೋಲೆ ಹೊರಡಿಸಿದೆ.
ಸಾರ್ವಜನಿಕ ಪಿಂಚಣಿ ನಿಧಿ, ಸುಕನ್ಯ ಸಮೃದ್ಧಿ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಖಾತೆ, ಅಂಚೆ ಕಚೇರಿಗಳಲ್ಲಿ ತೆರೆಯುವ ಉಳಿತಾಯ ಖಾತೆಗಳಿಗೆ ಆಧಾರ್ ಮತ್ತು ಪ್ಯಾನ್ ಎರಡನ್ನೂ ಕಡ್ಡಾಯಗೊಳಿಸಲಾಗಿದೆ.
ಈಗಾಗಲೇ ಸಣ್ಣ ಉಳಿತಾಯ ಖಾತೆಯನ್ನು ಹೊಂದಿರುವವರು ತಾವು ಖಾತೆ ತೆರೆಯುವ ವೇಳೆ ಆಧಾರ್ ದಾಖಲಾತಿ ಸಲ್ಲಿಸದೇ ಹೋದರೆ ಅವರಿಗೆ ಸೆಪ್ಟೆಂಬರ್ 30ರವರೆಗೆ ಆಧಾರ್ ಸಲ್ಲಿಸಲು ಅವಕಾಶ ಇದೆ.
ಒಂದು ಸೆಪ್ಟೆಂಬರ್ 30ರೊಳಗೆ ಆಧಾರ್ ದಾಖಲೆ ಸಲ್ಲಿಸದೇ ಇದ್ದಲ್ಲಿ ಆಗ ಸಣ್ಣ ಉಳಿತಾಯ ಖಾತೆಗಳು ಅಕ್ಟೋಬರ್ 1ರಿಂದ ನಿಷ್ಕ್ರಿಯ ಆಗ್ತವೆ.
ಒಂದು ವೇಳೆ ಆಧಾರ್ ದಾಖಲೆ ಇಲ್ಲದೇ ಸಣ್ಣ ಉಳಿತಾಯ ಖಾತೆ ತೆರೆಯಲು ಬಯಸುವವರು ತಾವು ಖಾತೆ ಮಾಡಿಸಿದ 6 ತಿಂಗಳೊಳಗೆ ಆಧಾರ್ ದಾಖಲೆ ಸಲ್ಲಿಸುವುದು ಕಡ್ಡಾಯ.
ADVERTISEMENT
ADVERTISEMENT