ಆಧಾರ್ ವಿವರಗಳನ್ನು ಉಚಿತವಾಗಿ ಅಪ್ಡೇಟ್ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಕೊಟ್ಟ ಗಡುವು ಸಮೀಪಿಸಿದೆ.
ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಿಕೊಳ್ಳಲು ಮಾರ್ಚ್ 15ರಿಂದ ಯುಐಡಿಎಐ ಸಂಸ್ಥೆ ಅವಕಾಶ ನೀಡಿತ್ತು. ಈ ಪ್ರಕ್ರಿಯೆ ಜೂನ್ 14ಕ್ಕೆ ಅಂದರೇ ಇಂದು ಮುಗಿಯಲಿದೆ.
ಈ ಗಡುವು ಮುಗಿದ ನಂತರ ಹಣಕೊಟ್ಟು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಬೇಕಾಗುತ್ತದೆ.
ಯುಐಡಿಎಐ ನಿಯಮದ ಪ್ರಕಾರ ಪ್ರತಿ 10 ವರ್ಷಕ್ಕೊಮ್ಮೆ ಆಧಾರ್ಗೆ ಸಂಬಂಧಿಸಿದ ವಿವರಗಳನ್ನು ಅಪ್ಡೇಟ್ ಮಾಡಿಕೊಳ್ಳಬೇಕಾಗುತ್ತದೆ.
ಇದಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಸಮರ್ಪಿಸಬೇಕು. ಉಚಿತ ಸೇವೆಗಳು ಮೈ ಆಧಾರ್ ಪೋರ್ಟಲ್ನಲ್ಲಿ ಮಾತ್ರ ಲಭ್ಯ ಇವೆ.
ಹೆಸರು, ಜನ್ಮದಿನಾಂಕ, ಅಡ್ರೆಸ್ ಮಾರ್ಪಾಡುಗಳನ್ನು ಮಾಡಿಕೊಳ್ಳಬಹುದು.
ಈ ದಿನ ಬಿಟ್ಟರೇ ನಾಳೆಯಿಂದ ಆಧಾರ್ ಕೇಂದ್ರಗಳಲ್ಲಿ 50 ರೂಪಾಯಿ ಪಾವತಿ ಮಾಡಿ ಅಪ್ಡೇಟ್ ಮಾಡಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಇಂದೇ ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಿಕೊಳ್ಳಿ..
ನೀವೇ ಟ್ರೈ ಮಾಡಿ.. ಇಲ್ಲವೇ ನಿಮ್ಮ ಸನಿಹದ ಆಧಾರ್ ಕೇಂದ್ರಕ್ಕೆ ತೆರಳಿ
ಹೀಗೆ ಅಪ್ಡೇಟ್ ಮಾಡಿಕೊಳ್ಳಿ
* http;//myaadhaar.uidai.gov.in ವೆಬ್ಸೈಟ್ನಲ್ಲಿ ಆಧಾರ್ ನಂಬರ್ ಮೂಲಕ ಲಾಗಿನ್ ಆಗಬೇಕು