ನಟ ಆದಿ ಪಿನ್ನಿಶೆಟ್ಟಿ ಹಾಗೂ ನಿಕ್ಕಿ ಗಲ್ರಾನಿಯವರು ಬುಧವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಿಂದೂ ಸಂಪ್ರದಾಯದಂತೆ ಚೆನ್ನೈನಲ್ಲಿ ಮದುವೆ ಸಮಾರಂಬ ನೆರವೇರಿದೆ. ಕೆಲವೇ ಜನ ಸ್ನೇಹಿತರು ಹಾಗೂ ಕುಟುಂಬ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಒಂದು ತಿಂಗಳ ಹಿಂದೆಯಷ್ಟೇ ನಟಿ ಸಂಜನ ಗಲ್ರಾನಿಯವರ ಸಹೋದರಿ ನಿಕ್ಕಿ ಗಲ್ರಾನಿ ಹಾಗೂ ನಟ ಆದಿ ಪಿನಿಶೆಟ್ಟಿಯವರ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿತ್ತು.
ಆಲುಮಾ ಡೋಲುಮಾ ಹಾಡಿನ ಮೆಹೆಂದಿ ಸಮಾರಂಭದಲ್ಲಿ ಆದಿ ಅವರ ಆಪ್ತರಾದ ನಾನಿ ಮತ್ತು ಸಂದೀಪ್ ಕಿಶನ್ ಡ್ಯಾನ್ಸ್ ಮಾಡಿದ್ದಾರೆ. ನಂತರ ಸಂಜೆ, ಅವರು ನಟರಾದ ಆರ್ಯ ಮತ್ತು ಸಯೇಶಾ ಅವರು ಪಾರ್ಟಿಯಲ್ಲಿ ಭಾಗವಹಿಸಿದ್ದರು.
ಆದಿ ಪಿನಿಶೆಟ್ಟಿ ಹಾಗೂ ನಿಕ್ಕಿ ಗಲ್ರಾನಿ ಮದುವೆ ಸಮಾರಂಭದ ಫೋಟೊ ಹಾಗೂ ವೀಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಆದಿ ಪಿನಿಶೆಟ್ಟಿ ಅವರು 2006 ರ ತೆಲುಗು ಚಲನಚಿತ್ರ ‘ಓಕಾ ‘ವಿ’ ಚಿತ್ರಂ’ ಮೂಲಕ ತೆಲುಗು ಚಲನಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದರು. ಪ್ರಸ್ತುತ ಇವರು ಲಿಂಗುಸಾಮಿ’ ಮ್ಯಾಗ್ನಮ್ ಆಪಸ್, ಆಕ್ಷನ್ ಥ್ರಿಲ್ಲರ್ ಡ್ರಾಮಾ ‘ದಿ ವಾರಿಯರ್’ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.