Friday, December 27, 2024

`ಕರ್ನಾಟಕದಲ್ಲೂ ಕೇಜ್ರಿವಾಲ್‌ಗೆ ಒಂದು ಅವಕಾಶ ಕೊಡಿ’ – AAP ಮಿಸ್ಡ್ ಕಾಲ್ ಅಭಿಯಾನ

ಪಂಜಾಬ್‌ನಲ್ಲಿ ಪ್ರಚಂಡ ಜಯದ ಬಳಿಕ ಈಗ ಆಮ್ ಆದ್ಮಿ ಪಾರ್ಟಿ ಈ ವರ್ಷ ಮತ್ತು ಮುಂದಿನ ವರ್ಷ ಚುನಾವಣೆ ನಡೆಯಲಿರುವ ರಾಜ್ಯಗಳ ಮೇಲೆ ಕಣ್ಣು ನೆಟ್ಟಿದೆ. 2013ಕ್ಕೆ ಚುನಾವಣೆ ನಡೆಯಲಿರುವ ಕರ್ನಾಟಕದಲ್ಲಿ ಆಮ್ ಆದ್ಮಿ ಪಾರ್ಟಿ ಸಿದ್ಧತೆ ಆರಂಭಿಸಿದೆ.

ಕರ್ನಾಟಕದಲ್ಲಿ ಎಎಪಿ ಸದಸ್ಯತ್ವ ಅಭಿಯಾನ ಆರಂಭಿಸಿದೆ. ಎಎಪಿಗೆ ಸೇರಲು 7412 042 042 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವಂತೆ ಕರೆ ನೀಡಿದೆ. `ದೆಹಲಿ, ಪಂಜಾಬ್ ಗೆದ್ದಾಗಿದೆ. ಕರ್ನಾಟಕ ಸಿದ್ಧವಾಗಿದೆ. ಕ್ರೇಜಿವಾಲ್‌ಗೆ ಒಂದು ಅವಕಾಶ ಕೊಡಿ. ಪ್ರಾಮಾಣಿಕ ರಾಜಕಾರಣ, ಉಳಿಯಲಿದೆ ಜನರ ಹಣ’ ಎಂದು ಆಮ್ ಆದ್ಮಿ ಪಾರ್ಟಿಗೆ ಕರ್ನಾಟಕದಲ್ಲಿ ಅವಕಾಶ ನೀಡುವಂತೆಯೂ ಆಮ್ ಆದ್ಮಿ ಪಾರ್ಟಿಯನ್ನು ಸೇರುವಂತೆಯೂ ಜನರಿಗೆ ಕರೆ ನೀಡಿದೆ.

ಕರ್ನಾಟಕ ಆಮ್ ಆದ್ಮಿ ಪಾರ್ಟಿಯ ಈ ಪೋಸ್ಟರ್ ಗಳಲ್ಲಿ ಆಮ್ ಆದ್ಮಿ ಪಾರ್ಟಿ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಮತ್ತು ಬೆಂಗಳೂರು ನಗರದ ಆಮ್ ಆದ್ಮಿ ಪಾರ್ಟಿ ಅಧ್ಯಕ್ಷ ಮೋಹನ್ ದಾಸರಿ ಫೋಟೋ ಇದೆ.

 

error: Content is protected !!