ಅಯೋಧ್ಯೆಯಲ್ಲಿ ಐತಿಹಾಸಿಕ ಘಟ್ಟ ಅವಿಷ್ಕೃತಗೊಂಡಿದೆ.
ಏಳು ಖಂಡಗಳ 155 ದೇಶಗಳಿಂದ ತಂದ ಪವಿತ್ರ ಜಲದಿಂದ ಅಯೋಧ್ಯೆ ರಾಮಮಂದಿರ ಸ್ಥಳದಲ್ಲಿ ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯರು ಅಭಿಷೇಕವನ್ನು ಮಾಡಿದ್ದಾರೆ.
ಈ ಐತಿಹಾಸಿಕ ಕ್ಷಣಕ್ಕೆ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಸಹ 40 ದೇಶಗಳಿಗೆ ಸೇರಿದ ಎನ್ಆರ್ ಐ ಗಳು ಸಾಕ್ಷಿಯಾದರು.
ನೆರೆಯ ದೇಶ ಪಾಕಿಸ್ತಾನ, ಉಕ್ರೇನ್, ರಷ್ಯಾದಿಂದಲೂ ಪವಿತ್ರ ಜಲವನ್ನು ತಂದು ಅಯೋಧ್ಯೆ ರಾಮನಿಗೆ ವೇದಘೋಷಗಳೊಂದಿಗೆ ಅಭಿಷೇಕ ನಿರ್ವಹಿಸಿರುವುದು ವಿಶೇಷ.
ಮೊಘಲರ ದೊರೆ ಬಾಬರ್ ಜನ್ಮಸ್ಥಳವಾದ ಉಜ್ಬೇಕಿಸ್ತಾನದ ಪ್ರಸಿದ್ಧ ನದಿ ಕಷಕ್ ನಿಂದಲೂ ಜಲವನ್ನು ತಂದು ಪೂಜೆಗಳನ್ನು ಮಾಡಿದ್ದು ಮತ್ತೊಂದು ವಿಶೇಷ.
155 ದೇಶಗಳಿಂದ ಪವಿತ್ರ ಜಲವನ್ನು ಸಂಗ್ರಹಿಸಲು ಟ್ರಸ್ಟ್ ಗೆ ಎರಡೂವರೆ ವರ್ಷವೇ ಬೇಕಾಯ್ತು