ರೈಲ್ವೇ ಹಳಿ ಮೇಲೆ ಸಿಲುಕಿದ ಸರಕು ಸಾಗಣೆ ಲಾರಿಗೆ(ಟ್ರಕ್) ರೈಲು ಡಿಕ್ಕಿಹೊಡೆದಿದೆ. ಈ ಪರಿಣಾಮ ಲಾರಿಯ ಹಿಂಭಾಗ ಸಂಪೂರ್ಣ ಜಖಂಗೊಂಡಿದೆ.
ಬೀದರ್ ಜಿಲ್ಲೆ ಭಾಲ್ಕಿಯ ಸಿದ್ದೇಶ್ವರ ರೇಲ್ವೆ ಕ್ರಾಸಿಂಗ್ ಬಳಿ ಈ ದುರ್ಘಟನೆ ನಡೆದಿದೆ. ಟ್ರೈನ್ ಬರುತ್ತಿದೆಂದು ಗೇಟ್ ಮ್ಯಾನ್ ರೇಲ್ವೆ ಗೇಟ್ ಹಾಕಿದ್ದಾನೆ. ಅಷ್ಟರಲ್ಲಿಯೇ ಲಾರಿ ರೈಲು ಹಳಿಯ ಮೇಲೆ ಸಿಲುಕಿಕೊಂಡಿದೆ.
ರೈಲು ಹಳಿಯ ಮೇಲೆ ಸಿಲುಕಿಕೊಂಡಿದ್ದ ಲಾರಿಗೆ ರೈಲು ಡಿಕ್ಕಿ ಹೊಡೆದಿದೆ. ಲಾರಿಯ ಹಿಂಭಾಗ ಸಂಪೂರ್ಣ ಜಖಂಗೊಂಡಿದೆ. ಅದೃಷ್ಠವಶಾತ್, ಲಾರಿಯ ಡ್ರೈವರ್ ಮತ್ತು ಕ್ಲೀನರ್ ಲಾರಿಯಿಂದ ಜಂಪ್ ಮಾಡಿ ಪಾರಾಗಿದ್ದಾರೆ.
ಯಾವುದೇ ಪ್ರಣಾಪಾಯ, ಗಾಯಗಳಾದ ಬಗ್ಗೆ ವರದಿಯಾಗಿಲ್ಲ.