ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಬೆಂಡಿಗೇರಿ ರಸ್ತೆಯ ಬಳಿ ಡಿಸೇಲ್ ಟ್ಯಾಂಕರ್ ಏಕಾಏಕಿ ಧಗಧಗನೇ ಹೊತ್ತಿ ಉರಿದಿದೆ.
ಘಟನೆಯಲ್ಲಿ ಡಿಸೇಲ್ ಟ್ಯಾಂಕರ್ಗೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದಾನೆ. ನಾಗರಾಜ ಮೋರಗೆರೆ (32) ಮೃತ ದುರ್ದೈವಿ. ಇನ್ನೋರ್ವ 38 ವರ್ಷದ ಚಂದ್ರು ಮೋರಗೆರೆ ಅವರಿಗೆ ಗಂಭೀರ ಗಾಯಗಳಾಗಿದ್ದು, ಹರಪನಹಳ್ಳಿ ಸಾರ್ವಜನಿಕ ಆಸ್ವತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಬೈಕ್ ಸುಟ್ಟು ಕರಕಲಾಗಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಬೆಂಕಿ ನಂದಿಸಿದ್ದಾರೆ. ಸಿಪಿಐ ನಾಗರಾಜ ಕಮ್ಮಾರ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.