ಈಗಿನ ಕಾಲದಲ್ಲಿ ಹಣ ಮಾಡಲು ಏನು ಬೇಕಾದರೂ ಮಾಡುವವರಿದ್ದಾರೆ. ಆದರೆ ಕಷ್ಟಪಟ್ಟು ಕೆಲಸ ಮಾಡಬೇಕೆಂಬ ಉತ್ಸಾಹ ಇದ್ದವರಿಗೆ ಮಾತ್ರ ಲಕ್ಷ್ಮಿ ಅನುಗ್ರಹವಿರುತ್ತದೆ ಎಂದು ಚಾಣಕ್ಯ ಹೇಳಿದ್ದಾರೆ. ಮನುಷ್ಯನಿಗೆ ಇರುವ ಕೆಲವು ಅಭ್ಯಾಸ ಗಳು ಲಕ್ಷ್ಮಿ ದೇವಿಗೆ ಕೋಪ ತರಿಸುತ್ತೆ ಎಂಬುದು ಚಾಣಕ್ಯ ನಂಬಿಕೆ. ಅವುಗಳನ್ನು ಸಕಾಲದಲ್ಲಿ ಸರಿ ಮಾಡಿಕೊಳ್ಳದವರ ಮನೆಯಲ್ಲಿ ಲಕ್ಷ್ಮಿ ನಿಲ್ಲಲ್ಲ. ಆ ಪ್ರದೇಶದಲ್ಲಿ ದುಃಖ, ಬಡತನ ತಾಂಡವವಾಡುತ್ತವೆ.
# ಲಕ್ಷ್ಮಿ ದೇವಿಯನ್ನು ಪ್ರಸನ್ನ ಮಾಡಿಕೊಳ್ಳಲು ಮನೆಯನ್ನು ಮಾತ್ರವಲ್ಲ ಶರೀರ, ದಂತ, ಬಟ್ಟೆಗಳ ಶುಭ್ರತೆಯಲ್ಲಿ ನಿಗಾ ವಹಿಸಬೇಕು.
# ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವನೆ ಮಾಡುವವರು ಸಹ ಧನವಂತರಾಗಲ್ಲ. ಅಂಥವರಿಗೆ ಅನಾರೋಗ್ಯ ಬಾಧಿಸುತ್ತದೆ. ಈ ಸಮಸ್ಯೆಗಳ ಪರಿಹಾರಿಸಿಕೊಳ್ಳಲು ಹಣ ವ್ಯರ್ಥ ಮಾಡಬೇಕಾಗುತ್ತದೆ.
# ಕಠೋರವಾಗಿ ಮಾತನಾಡುವವರು ಒಳ್ಳೆಯ ಅವಕಾಶಗಳನ್ನು ಸದ್ವಿನಿಯೋಗ ಮಾಡಿಕೊಳ್ಳುವುದಿಲ್ಲ.
# ಸೂರ್ಯಸ್ತದ ಸಂದರ್ಭದಲ್ಲಿ ಮಲಗುವವರಿಗೆ ಲಕ್ಷ್ಮಿ ದೇವಿಯ ಅನುಗ್ರಹ ಇರುವುದಿಲ್ಲ. ಅಂಥವರು ಸೋಂಬೇರಿಗಳಾಗಿರುತ್ತಾರೆ. ದೊಡ್ಡ ದೊಡ್ಡ ಕನಸು ಕಾಣುತ್ತಾರೆ. ಆದರೆ ಏನು ಕೆಲಸ ಮಾಡುವುದಿಲ್ಲ.
# ಮೋಸ, ಕುತಂತ್ರ ಮಾಡುವವರ ಬಳಿ ಹಣ ಕಾಲ ನಿಲ್ಲುವುದಿಲ್ಲ. ಅವರನ್ನು ರೋಗ ರುಜಿನ ಹೆಚ್ಚು ಬಾಧಿಸುತ್ತವೆ. ಅವರು ನೆಮ್ಮದಿಯಾಗಿ ಇರುವುದಿಲ್ಲ. ಸರ್ವಸ್ವವನ್ನು ಕಳೆದುಕೊಳ್ಳುತ್ತಾರೆ.
ಹೀಗಾಗಿಯೇ ಸಕ್ರಮ ಸಂಪಾದನೆ ಅಗತ್ಯ ಎಂದು ಚಾಣಕ್ಯ ಹೇಳುತ್ತಾರೆ.