ಮೈಸೂರು ದಸರಾ ಸೋಮವಾರದಿಂದ ಭರ್ಜರಿಯಾಗಿ ಆರಂಭವಾಗಿದೆ. ಸೋಮವಾರದಿಂದ ನವರಾತ್ರಿ ಸಮಾರಂಭಗಳು ನಡೆಯಲಿವೆ. ಹಾಗೆಯೇ, ಮಂಗಳವಾರ ಯುವ ದಸರಾ ಕಾರ್ಯಕ್ರಮವೂ ಉದ್ಘಾಟನೆಗೊಳ್ಳಲಿದೆ. ಆದರೆ, ಈ ಕಾರ್ಯಕ್ರಮದ ಉದ್ಘಾಟನೆಗೆ ಒಪ್ಪಿಕೊಂಡಿದ್ದ ನಟ ಕಿಚ್ಚ ಸುದೀಪ್ (Actor Kichcha Sudeep) ಬರುತ್ತಿಲ್ಲ ಎನ್ನುವ ಬಗ್ಗೆ ವರದಿಯಾಗಿದೆ.
ನಟ ಕಿಚ್ಚ ಸುದೀಪ್ ಮಂಗಳವಾರ ಸಂಜೆ ಸೆಪ್ಟಂಬರ್ 27 ರಂದು ಯುವ ದಸರಾ ಉದ್ಘಾಟಿಸಬೇಕಿತ್ತು. ಆದರೆ, ಇದೀಗ ಬರಲು ಆಗುತ್ತಿಲ್ಲ ಎಂದು ಹೇಳಿದ್ದಾರೆ ಎಂದು ಯುವ ದಸರಾ ಸಮಿತಿ ತಿಳಿಸಿದೆ.
ಸುದೀಪ್ (Actor Kichcha Sudeep) ಒಪ್ಪಿಗೆ ಮೇರೆಗೆ ಯುವ ದಸರಾ ಉದ್ಘಾಟಿಸಲು ಸುದೀಪ್ ಬರುವ ಬಗ್ಗೆ ಯುವ ದಸರಾ ಸಮಿತಿ ಪ್ರಚಾರ ನಡೆಸಿತ್ತು. ಆದರೆ, ಶನಿವಾರ ಸಂಜೆ ನಾನು ಕಾರ್ಯಕ್ರಮಕ್ಕೆ ಬರಲು ಆಗಲ್ಲ ಅಂತಾ ಸುದೀಪ್ ಹೇಳಿದ್ದಾರೆ. ಸುದೀಪ್ ಅವರ ಈ ದಿಡೀರ್ ನಿರ್ಧಾರದಿಂದ ಯುವ ದಸರಾ ಸಮಿತಿಗೆ ಶಾಕ್ ಆಗಿದೆ. ಇದೀಗ, ಒಂದೇ ದಿನದಲ್ಲಿ ಬೇರೆ ಸೆಲೆಬ್ರಿಟಿ ಗೆಸ್ಟ್ ಗೆ ಯುವ ದಸರಾ ಸಮಿತಿ ಹುಡುಕಾಟ ಆರಂಭಿಸಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಬಿಗ್ ಬಾಸ್ ಇದು ಮೊದಲ ಸೀಸನ್, 9ನೇಯದ್ದಲ್ಲ..! ಕಿಚ್ಚ ಸುದೀಪ್ ಹೀಗೆ ಹೇಳಿದ್ದೇಕೆ.!