ಟಾಲಿವುಡ್ (Tollywood )ಪ್ರಮುಖ ನಟ ಮಹೇಶ್ ಬಾಬು (Mahesh Babu ) ತಾಯಿ, ಸೂಪರ್ ಸ್ಟಾರ್ ಘಟ್ಟಮನೇನಿ ಕೃಷ್ಣ (Super Star Krishna)ಅವರ ಧರ್ಮಪತ್ನಿ ಇಂದಿರಾದೇವಿ (IndiraDevi )ಇನ್ನಿಲ್ಲ.
ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹೈದರಾಬಾದ್ ನ ತಮ್ಮ ನಿವಾಸದಲ್ಲಿ ಇಂದು ನಸುಕಿನ ಜಾವ ಇಹಲೋಕ ತ್ಯಜಿಸಿದ್ದಾರೆ. ಟಾಲಿವುಡ್ ನಲ್ಲಿ ಇದೀಗ ವಿಷಾದಛಾಯೆ ಆವರಿಸಿದೆ.
ಕೃಷ್ಣ – ಇಂದಿರಾದೇವಿ ದಂಪತಿಗಳಿಗೆ ಐವರು ಮಕ್ಕಳು. ರಮೇಶ್ ಬಾಬು, ಮಹೇಶ್ ಬಾಬು, ಪದ್ಮಾವತಿ, ಮಂಜಲ, ಪ್ರಿಯದರ್ಶಿನಿ..
ಈ ಪೈಕಿ ಕೆಲ ದಿನಗಳ ಹಿಂದಷ್ಟೇ ರಮೇಶ್ ಬಾಬು ಸಾವನ್ನಪ್ಪಿದ್ದರು. ಇದೀಗ ಇಂದಿರಾದೇವಿ ಸಾವಿನೊಂದಿಗೆ ಮಹೇಶ್ ಬಾಬು ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.