ಖ್ಯಾನ ನಟ ಹಾಗೂ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾನ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ರಾಜಕೀಯ ಸಮಾವೇಶದ ನಿಮಿತ್ತ ಪವನ್ ಕಲ್ಯಾಣ್ ಅವರು ಗೋದಾವರಿ ಜಿಲ್ಲೆಗಳಲ್ಲಿ ಎರಡು ದಿನ ಪ್ರವಾಸ ಮಾಡಿದ್ದರು. ಈ ವೇಳೆ ಅವರು ಅನಾರೋಗ್ಯಕ್ಕೀಡಾಗಿದ್ದಾರೆ. ಇವರಿಗೆ ವೈರಲ್ ಜ್ವರ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.
ಪವನ್ ಕಲ್ಯಾಣ್ಗೆ ಅನಾರೋಗ್ಯ ನಿಮಿತ್ತ ಇದೇ ತಿಂಗಳ 24 ರಂದು ನಡೆಯಬೇಕಿದ್ದ ಜನವಾಣಿ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಈ ಕಾರ್ಯಕ್ರಮವನ್ನಿ ಇದೇ ತಿಂಗಳ 31 ರಂದು ನಡೆಸಲಾಗುವುದು ಎಂದುಜನಸೇನಾ ಪಕ್ಷದ ಪಿಎಸಿ ಅಧ್ಯಕ್ಷ ನಾದೆಂಡ್ಲ ಮನೋಹರ್ ತಿಳಿಸಿದ್ದಾರೆ.
ఈ నెల 31న తదుపరి జనవాణి – JanaSena Party PAC Chairman Shri @mnadendla pic.twitter.com/k9mWoMNt3Q
— JanaSena Party (@JanaSenaParty) July 20, 2022
ವೈರಲ್ ಜ್ವರದ ಕಾರಣದಿಂದ ಅನಾರೋಗ್ಯದಿಂದ ಬಳಲುತ್ತಿರುವ ನಟ ಪವನ್ ಕಲ್ಯಾಣ್ ಹೈದ್ರಾಬಾದ್ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಅನಾರೋಗ್ಯ ಹಿನ್ನೆಲೆಯಲ್ಲಿ ಚಲನಚಿತ್ರಗಳ ಶೂಟಿಂಗ್ಗೂ ನಟ ಭಾಗಿಯಾಗಿಲ್ಲ.
ಇನ್ನು, ನಟ ಪವನ್ ಕಲ್ಯಾಣ್ಗೆ ಅನಾರೋಗ್ಯ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗುತ್ತಲೇ ಅವರ ಅಭಿಮಾನಿಗಳು ಶೀಘ್ರ ಚೇತರಿಕೆಗೆ ಆಗ್ರಹಿಸುತ್ತಿದ್ದಾರೆ.