ಬಹುಭಾಷಾ ನಟ ಸೋನು ಸೂದ್ ಅವರನ್ನು ಬಿಜೆಪಿ (BJP) ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ( B L Santosh) ಅವರನ್ನು ಭೇಟಿ ಆಗಿದ್ದಾರೆ.
ಈ ಭೇಟಿಯ ಬೆನ್ನಲ್ಲೇ ಸೋನು ಸೂದ್ (Sonu Sood) ಅವರು ಬಿಜೆಪಿಗೆ ಸೇರ್ಪಡೆ ಆಗಲಿದ್ದಾರೆ ಎಂಬ ಚರ್ಚೆ ಶುರುವಾಗಿದೆ.

ಇದೇ ವರ್ಷದ ಮಾರ್ಚ್ನಲ್ಲಿ ನಡೆದಿದ್ದ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಸೋನು ಸೂದ್ ಅವರ ಸಹೋದರಿ ಮಾಳವಿಕಾ ಸೂದ್ (Malvika Sood) ಅವರು ಕಾಂಗ್ರೆಸ್ಗೆ ಸೇರ್ಪಡೆ ಆಗಿದ್ದರು.
ಕಾಂಗ್ರೆಸ್ ಅಭ್ಯರ್ಥಿಯಾಗಿ ಮೋರಾದಿಂದ (Mora, Punjab) ಸ್ಪರ್ಧಿಸಿದ್ದ ಸೋನು ಸೂದ್ ಸಹೋದರಿ ಆಮ್ ಆದ್ಮಿ ಪಕ್ಷದ ಡಾ ಅಮನ್ದೀಪ್ ಕೌರ್ ಅವರ ಎದುರು 20 ಸಾವಿರ ಮತಗಳಿಂದ ಸೋತಿದ್ದರು.