ಇಡೀ ದೇಶವೇ ಕುಸ್ತಿಪಟುಗಳಿಗೆ ನ್ಯಾಯ ಕೊಡಿ ಎಂದು ಕೇಳುತ್ತಿದೆ. ಬಿಜೆಪಿ ನಾಯಕಿ ಕಮ್ ನಟಿ ನಮಿತಾ ಮಾತಿನ ವರಸೆಯೇ ಬೇರೆ.
ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ ಬ್ರಿಜ್ಭೂಷಣ್ ಸಿಂಗ್ ಅವರ ವಾದ, ಆವರ ಕಡೆಗಿನ ನ್ಯಾಯವನ್ನು ಪರಿಶೀಲಿಸಲು ಅವಕಾಶ ಕೊಡಬೇಕು
ಎಂದು ನಟಿ ನಮಿತಾ ಹೇಳಿಕೆ ನೀಡಿದ್ದಾರೆ.
ಆದರೆ, ಅಪ್ಪಿತಪ್ಪಿಯೂ ಮಹಿಳಾ ಕುಸ್ತಿಗಳಿಗೆ ನ್ಯಾಯ ಸಿಗಬೇಕು ಎಂಬ ಮಾತನ್ನು ನಟಿ ನಮಿತಾ ಹೇಳಿಲ್ಲ ಎನ್ನುವುದು ಗಮನಾರ್ಹ.
ಇದೇ ವೇಳೆ, ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈರನ್ನು ತಮಿಳು ಸಿಂಹ ಎಂದು ನಟಿ ನಮಿತಾ ಹಾಡಿ ಹೊಗಳಿದ್ದಾರೆ.
ಮೇ 28ರಂದು ನೂತನ ಸಂಸತ್ ಭವನವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿರುವುದು ಇಡೀ ದೇಶಕ್ಕೆ ಗರ್ವ ಕಾರಣ ಎಂದು ನಟಿ ಕಮ್ ಬಿಜೆಪಿ ನಾಯಕಿ ನಮಿತಾ ಹೇಳಿಕೆ ನೀಡಿದ್ದಾರೆ
ADVERTISEMENT
ADVERTISEMENT