ಬಹುಭಾಷಾ ನಟಿ ಪ್ರಣೀತಾ ಸುಭಾಷ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಯ ಚಿತ್ರಗಳಲ್ಲಿ ನಟಿಸಿರುವ ಪ್ರಣೀತಾ, ಕಳೆದ ವರ್ಷ ಮೇನಲ್ಲಿ ಉದ್ಯಮಿ ನಿತಿನ್ ರಾಜು ಜೊತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಇತ್ತೀಚೆಗೆ ಅವರ ಬೇಬಿ ಬಂಪ್ ಚಿತ್ರಗಳು ವೈರಲ್ ಆಗಿದ್ದವು.
ಹೆಣ್ಣು ಮಗು ಜನನವಾಗಿರುವ ಬಗ್ಗೆ ಟ್ವೀಟ್ ಮಾಡಿ ತಿಳಿಸಿರುವ ಅವರು, ಕಡಿಮೆ ನೋವಿನಲ್ಲಿ ಹೆರಿಗೆ ಮಾಡಿಸಿದ ವೈದ್ಯಕೀಯ ತಂಡಕ್ಕೆ ಧನ್ಯವಾದ ಎಂದು ಪ್ರಣೀತಾ ಹೇಳಿದ್ದಾರೆ.
The last few days have been surreal. Ever since our baby girl arrived.. 🧿❤️ pic.twitter.com/kKWsTU8gqW
— Pranitha Subhash (@pranitasubhash) June 10, 2022
‘ಅರಿವಳಿಕೆ ತಜ್ಞ ಡಾ.ಸುಬ್ಬು ಮತ್ತು ಅವರ ತಂಡಕ್ಕೆ ನಾನು ಈ ಸಂದರ್ಭದಲ್ಲಿ ಧನ್ಯವಾದ ಹೇಳಲು ಬಯಸುತ್ತೇನೆ. ನಾನು ಹೆಣ್ಣುಮಗುವಿಗೆ ಜನ್ಮ ನೀಡಿರುವ ವಿಷಯವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಹೆಚ್ಚುಹೊತ್ತು ಕಾಯಲು ಸಾಧ್ಯವಿಲ್ಲ’ ಅಂತಾ ಅವರು ಬರೆದುಕೊಂಡಿದ್ದಾರೆ.