ನಟಿ ರಮ್ಯಾ ಹೂಡಿರುವ ನಷ್ಟ ಪರಿಹಾರ ಮೊಕದ್ದಮೆಯಲ್ಲಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ತಂಡಕ್ಕೆ ಭಾರೀ ಹಿನ್ನಡೆಯಾಗಿದೆ.
ಒಂದು ವಾರದ ಒಳಗೆ 50 ಲಕ್ಷ ರೂಪಾಯಿ ಮೊತ್ತವನ್ನು ಭದ್ರತಾ ಠೇವಣಿಯನ್ನಾಗಿ ಜಮೆ ಮಾಡಬೇಕೆಂದು ಸೂಚಿಸಿರುವ ಬೆಂಗಳೂರಿನ ನ್ಯಾಯಾಲಯ ನಟಿ ರಮ್ಯಾ ಅವರ ಜೊತೆಗೆ ಮಾಡಿಕೊಂಡಿದ್ದ ಒಪ್ಪಂದವನ್ನು ಸಿನಿಮಾ ತಂಡ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ ಎಂದು ಆದೇಶದಲ್ಲಿ ಹೇಳಿದೆ.
ಪ್ರಕರಣದ ಎಲ್ಲ ಅಂಶಗಳನ್ನು ನೋಡಿದಾಗ ಮೇಲ್ನೋಟಕ್ಕೆ ಪ್ರತಿವಾದಿಗಳು ಒಪ್ಪಂದವನ್ನು ಉಲ್ಲಂಘಿಸಿದ್ದಾರೆ ಎಂದು ಕಾಣಿಸುತ್ತಿದೆ. ಸಿನಿಮಾದ ಟ್ರೇಲರ್ನಲ್ಲಿ ತೋರಿಸಲ್ಲ ಎಂಬ ಮಾತನ್ನೂ ಪ್ರತಿವಾದಿಗಳು ಉಳಿಸಿಕೊಂಡಿಲ್ಲ. ಇತ್ತೀಚಿನ ಆಕೆಯ ವಾಟ್ಸಾಪ್ ಮೇಸೆಜ್ಗಳನ್ನು ನೋಡಿದಾಗ ಆಕೆ (ನಟಿ ರಮ್ಯಾ) ಒಪ್ಪಿಗೆಯನ್ನು ಕೊಟ್ಟಿಲ್ಲ ಮತ್ತು ಆಕೆಯ ಸಿನಿಮಾದ ಭಾಗವಾಗಲು ಬಯಸಿರಲಿಲ್ಲ, ಆದರೂ ಸಿನಿಮಾದಲ್ಲಿ ತೋರಿಸಲಾಗಿದೆ
ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.
1ನೇ ಮತ್ತು ಮೂರನೇ ಮತ್ತು ನಾಲ್ಕನೇ ಪ್ರತಿವಾದಿಗಳು (ಸಿನಿಮಾ ತಂಡ) ಅರ್ಜಿದಾರೆ (ನಟಿ ರಮ್ಯಾ) ವಾದಿಸಿರುವ ಪರಿಹಾರವನ್ನು ಈಡೇರಿಸುವ ಭಾಗವಾಗಿ 50 ಲಕ್ಷ ರೂಪಾಯಿ ಮೊತ್ತವನ್ನು ಜುಲೈ 27ರೊಳಗೆ ಭದ್ರತಾ ಠೇವಣಿಯಾಗಿ ಇಡಬೇಕು ಎಂದು ನ್ಯಾಯಾಲಯ ಸೂಚಿಸಿದೆ.
50 ಲಕ್ಷ ರೂಪಾಯಿ ಭದ್ರತಾ ಠೇವಣಿ ಇಡಬೇಕು ಎಂಬ ಷರತ್ತಿನೊಂದಿಗೆ ಸಿನಿಮಾ ಪ್ರದರ್ಶನಕ್ಕಿದ್ದ ತಡೆಯಾಜ್ಞೆಯನ್ನು ನ್ಯಾಯಾಲಯ ತೆರವುಗೊಳಿಸಿದೆ.
ADVERTISEMENT
ADVERTISEMENT