ಕನ್ನಡದ ನಟಿ ಶ್ರೀಲೀಲಾ (Sreeleela) ಅವರ ತಾಯಿ ಡಾ. ಸ್ವರ್ಣಲತಾ (Sreeleela mother Dr Swarnalatha) ವಿರುದ್ಧ ಬೆಂಗಳೂರು ಹೊರವಲಯ ಆನೇಕಲ್ (Anekal)ನ ಪೊಲೀಸರು ಎಫ್ಐಆರ್ (FIR) ದಾಖಲಿಸಿಕೊಂಡಿದ್ದಾರೆ.
ಪ್ರಕರಣದಲ್ಲಿ ಎರಡನೇ ಆರೋಪಿ ಆಗಿರುವ ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಪರಾರಿ ಆಗಿದ್ದಾರೆ ಎಂದು ವರದಿ ಆಗಿದ್ದು, ಮೊದಲ ಆರೋಪಿ ಮಧುಕರ್ ಅಂಗೂರ್ರನ್ನು (Madhukar Anguru) ಪೊಲೀಸರು ಬಂಧಿಸಿದ್ದಾರೆ.
ಏನಿದು ಪ್ರಕರಣ..?
ಖಾಸಗಿ ವಿವಿ ಆಗಿರುವ ಅಲಯನ್ಸ್ ವಿಶ್ವವಿದ್ಯಾಲಯವನ್ನು (Alliance VV) ಪ್ರಮುಖ ರಾಜಕಾರಣಿಯೊಬ್ಬರಿಗೆ ಮಾರಾಟ ಮಾಡಿಸುವ ಸಂಬಂಧ ಮಧುಕರ್ ಅಂಗೂರ್ ಜೊತೆ ಸೇರಿ ಸ್ವರ್ಣಲತಾ ವ್ಯವಹಾರ ಮಾಡಿದ್ದರು.
ಆದರೆ ಮಧುಕರ್ ಅಂಗೂರ್ ಅವರನ್ನು ಈ ಹಿಂದೆ ಸೆಷನ್ಸ್ ಕೋರ್ಟ್ ಮತ್ತು ಹೈಕೋರ್ಟ್ ನೀಡಿದ್ದ ಆದೇಶಗಳ ಮೇರೆ ವಿವಿಯಿಂದ ಹೊರಹಾಕಲಾಗಿತ್ತು.
ಮಧುಕರ್ ಅಂಗೂರ್ ಅವರನ್ನು ವಿವಿಯಿಂದ ಹೊರಹಾಕಿದ್ದರೂ ಅಂಗೂರ್ ಜೊತೆಗೆ ಸೇರಿ ಸ್ವರ್ಣಲತಾ ವಿವಿ ಮಾರಾಟಕ್ಕೆ ವ್ಯವಹಾರ ಮಾಡಿದ್ದರು.
ವಿವಿಗೆ ನುಗ್ಗಿ ಬಂದೂಕು ಗಲಾಟೆ ಮಾಡಿದ್ದ ಸ್ವರ್ಣಲತಾ..!
ಸೆಪ್ಟೆಂಬರ್ 10ರಂದು ಬೆಳಗ್ಗೆ 11 ಗಂಟೆಗೆ ವಿವಿಯ ಆಡಳಿತ ವಿಭಾಗಕ್ಕೆ ನುಗ್ಗಿ ಮಧುಕರ್ ಅಂಗೂರ್ ಮತ್ತು ಸ್ವರ್ಣಲತಾ ಬಂದೂಕು ಹಿಡಿದು ಗಲಾಟೆ ಮಾಡಿದ್ದರು. ಗುಂಪು ಕಟ್ಟಿಕೊಂಡು ಬಂದಿದ್ದ ಇಬ್ಬರೂ ವಿವಿಯಲ್ಲಿದ್ದ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿದ್ದರು. ಎಲ್ಲರ ಮೇಲೂ ಬಂದೂಕಿನಿಂದ ಗುಂಡು ಹಾರಿಸುವುದಾಗಿ ಬೆದರಿಸಿದ್ದರು.
ಈ ಗಲಾಟೆ ಹಿನ್ನೆಲೆಯಲ್ಲಿ ವಿವಿಯ ರಿಜಿಸ್ಟ್ರಾರ್ ಡಾ.ನಿವೇದಿತಾ ಮಿಶ್ರಾ ಅವರು ಆನೇಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ವೈದ್ಯೆ ಆಗಿರುವ ಶ್ರೀಲೀಲಾ ತಾಯಿ:
ನಟಿ ಶ್ರೀಲೀಲಾ ತಾಯಿ ಡಾ.ಸ್ವರ್ಣಲತಾ ಅವರು ಸ್ತ್ರೀ ರೋಗ ತಜ್ಞೆ.
ADVERTISEMENT
ADVERTISEMENT