ಬಂದರು, ಇಂಧನ, ವಿಮಾನನಿಲ್ದಾಣ, ಆಹಾರೋದ್ಯಮ ಬಳಿಕ ಈಗ ಸಿಮೆಂಟ್ ಉದ್ಯಮ ಕ್ಷೇತ್ರದಲ್ಲಿ ಗುಜರಾತ್ ಮೂಲದ ಉದ್ಯಮಿ ಗೌತಮ್ ಅದಾನಿ ತಮ್ಮ ಪಾರುಪತ್ಯ ಸಾಧಿಸುವ ಭಾಗವಾಗಿ ಪ್ರಮುಖ ಸಿಮೆಂಟ್ ಕಂಪನಿಗಳಾದ ಅಂಬುಜಾ ಸಿಮೆಂಟ್ ಮತ್ತು ಎಸಿಸಿ ಸಿಮೆಂಟ್ ಸ್ವಾಧೀನದಲ್ಲಿ ತೊಡಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಆಪ್ತರೂ ಆಗಿರುವ ಅದಾನಿ ಇಷ್ಟೊಂದು ದೈತ್ಯವಾಗಿ ಬೆಳೆಯಲು ಕಾರಣವಾಗಿದ್ದು ಬ್ಯಾಂಕ್ಗಳಲ್ಲಿ ಸಾಲ. ಸಾಲ ಎತ್ತುವಳಿ ಮೂಲಕ ಅದಾನಿ ದೇಶ ದೈತ್ಯ ಉದ್ಯಮಿಯಾಗಿ ವರ್ಧಿಸುತ್ತಿದ್ದಾರೆ.
2013ರ ವೇಳೆಗೆ 72 ಸಾವಿರ ಕೋಟಿ ರೂಪಾಯಿ ಇತ್ತು. 2014ರಲ್ಲಿ ಈ ಸಾಲ 74 ಸಾವಿರ ಕೋಟಿ ರೂಪಾಯಿಗೆ ಏರಿತು. 2015ರಲ್ಲಿ 85 ಸಾವಿರ ಕೋಟಿ ರೂಪಾಯಿ ಇದ್ದ ಸಾಲ 2016ರ ವೇಳೆಗೆ ಮೊದಲ ಬಾರಿಗೆ 1 ಲಕ್ಷ ದಾಟಿ 1 ಲಕ್ಷದ 6 ಸಾವಿರ ಕೋಟಿ ರೂಪಾಯಿಗೆ ಹೆಚ್ಚಳವಾಯಿತು.
2017ರ ವೇಳೆಗೆ 1 ಲಕ್ಷದ 12 ಸಾವಿರ ಕೋಟಿ ರೂಪಾಯಿ, 2018ರ ವೇಳೆಗೆ 1 ಲಕ್ಷದ 18 ಸಾವಿರ ಕೋಟಿ ರೂಪಾಯಿ, 2020ರ ವೇಳೆಗೆ 1 ಲಕ್ಷದ 39 ಸಾವಿರ ಕೋಟಿ ರೂಪಾಯಿಗೆ ಹೆಚ್ಚಳ ಆಯಿತು.
2021ರ ವೇಳೆಗೆ 1 ಲಕ್ಷದ 57 ಸಾವಿರ ಕೋಟಿ ರೂಪಾಯಿ ಸಾಲ ಹೆಚ್ಚಳ ಆಗಿತ್ತು. ಮೊದಲ ಬಾರಿಗೆ 2022ರ ವೇಳೆ ಅದಾನಿ ಸಾಲ 2 ಲಕ್ಷ ಕೋಟಿ ರೂಪಾಯಿ ಗಡಿ ದಾಟಿತು. 2022ರ ವೇಳೆಗೆ 2 ಲಕ್ಷದ 23 ಸಾವಿರ ಕೋಟಿ ರೂಪಾಯಿಗೆ ಬಂದು ನಿಂತಿದೆ.
ಸದ್ಯ ಅದಾನಿ ಕಂಪನಿಗಳ ಬಳಿ ಇರುವ ನಗದು ಮತ್ತು ಬ್ಯಾಂಕ್ ಠೇವಣಿ 26,989 ಕೋಟಿ ರೂಪಾಯಿ. ಈ ಮೂಲಕ ಒಂದೇ ವರ್ಷದ ಅಂತರದಲ್ಲಿ ಅದಾನಿ ಕಂಪನಿಗಳ ಸಾಲದ ಮೊತ್ತ ಶೇಕಡಾ 45ರಷ್ಟು ಏರಿಕೆ ಆಗಿದೆ.
ಅದಾನಿ ಕಂಪನಿಗಳ ಒಟ್ಟು ಈಕ್ವಿಟಿ ಷೇರುಗಳ ಮೌಲ್ಯಕ್ಕೆ ಹೋಲಿಸಿದರೆ ಕಂಪನಿಗಳ ಸಾಲದ ಮೊತ್ತ ಶೇಕಡಾ 2.36ಕ್ಕೆ ಹೆಚ್ಚಳ ಆಗಿದೆ. ಸದ್ಯ ಉಳಿದ ದೈತ ಕಂಪನಿಗಳ ಹೋಲಿಸಿದರೆ ಸಾಲದ ಅನುಪಾತ ಅದಾನಿ ಕಂಪನಿಯದ್ದೇ ಹೆಚ್ಚು.
ಟಾಟಾ ಕಂಪನಿಯ ಸಾಲದ ಮೊತ್ತ 3 ಲಕ್ಷದ 35 ಸಾವಿರ ಕೋಟಿ ರೂಪಾಯಿಯಾದರೂ ಈಕ್ವಿಟಿ ಷೇರುಗಳ ಅನುಪಾತದಲ್ಲಿ ಈ ಪ್ರಮಾಣ ಶೇಕಡಾ 1.3ರಷ್ಟೇ. ರಿಲಯನ್ಸ್ ಇಂಡಸ್ಟಿçÃಸ್ ಸಾಲದ ಮೊತ್ತ 2.82 ಲಕ್ಷ ಕೋಟಿ ರೂಪಾಯಿ ಇದೆ.
ಅದಾನಿ ಕಂಪನಿಗಳ ಸಾಲದ ಮೊತ್ತ ಏರಿಕೆ ಆಗುತ್ತಿದ್ದರೂ ಕಳೆದ 2 ವರ್ಷಗಳಲ್ಲಿ ಸಾಲದ ಮೇಲಿನ ಬಡ್ಡಿ ಇಳಿಕೆಯಿಂದ ಆ ಲಾಭ ಕೂಡಾ ಅದಾನಿ ಕಂಪನಿಗಳಿಗೆ ಅನುಕೂಲವಾಗಿದೆ. ಜೊತೆಗೆ ಅದಾನಿ ಕಂಪನಿಗಳ ಆದಾಯ ಕೂಡಾ ಹೆಚ್ಚಳವಾಗಿದ್ದು, ಸಾಲ ಮರು ಪಾವತಿ ಪ್ರಮಾಣ ಚೆನ್ನಾಗಿರುವ ಕಾರಣ ಈಗಿರುವ ಸಾಲದ ಮೊತ್ತದ ಅಷ್ಟೇನೂ ದೊಡ್ಡದಲ್ಲ ಎನ್ನುವುದು ತಜ್ಞರ ಮಾತು.
ಅದಾನಿ ಕಂಪನಿಗಳು: ಅದಾನಿ ಎಂಟರ್ಪ್ರೆöÊಸಸ್, ಅದಾನಿ ಪೋರ್ಟ್ಸ್ ಮತ್ತು ಎಸ್ಇಝಡ್, ಅದಾನಿ ಪವರ್, ಅದಾನಿ ಟ್ರಾನ್ಸ್ಮಿಷನ್, ಅದಾನಿ ಗ್ರೀನ್, ಅದಾನಿ ಟೋಟಲ್ ಗ್ಯಾಸ್, ಅದಾನಿ ವಿಲ್ಮಾರ್.
ಅದಾನಿ ಪೋರ್ಟ್ ಇನ್ನಷ್ಟೇ 2022ರ ಮಾರ್ಚ್ 31ಕ್ಕೆ ಅಂತ್ಯವಾಗುವ ಆರ್ಥಿಕ ವರ್ಷದ ನಾಲ್ಕನೇ ತ್ರೆöÊಮಾಸಿಕ ಅವಧಿಯ ಮಾಹಿತಿಯನ್ನು ಪ್ರಕಟಿಸಬೇಕಿದೆ.