ADVERTISEMENT
ಗುಜರಾತ್ ಮೂಲದ ಉ್ಯದಮಿಯೂ ಆಗಿರುವ ತಮ್ಮ ಸ್ನೇಹಿತ ಗೌತಮ್ ಅದಾನಿ ಕಾರಣದಿಂದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕನಿಷ್ಠ ಬೆಂಬಲ ಬೆಲೆಯನ್ನು ಜಾರಿಗೊಳಿಸುತ್ತಿಲ್ಲ ಎಂದು ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲಿಕ್ ಗಂಭೀರ ಆರೋಪ ಮಾಡಿದ್ದಾರೆ.
ಹರಿಯಾಣದಲ್ಲಿ ಕಾರ್ಯಕ್ರಮದಲ್ಲಿ ಮಾತಾಡಿದ ಅವರು ಮೋದಿ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಪಾಣಿಪತ್ನಲ್ಲಿ ಅದಾನಿ ದೊಡ್ಡ ಉಗ್ರಾಣವನ್ನು ಕಟ್ಟಿದ್ದಾರೆ ಮತ್ತು ಅದರಲ್ಲಿ ಕಡಿಮೆ ಬೆಲೆಗೆ ಖರೀದಿಸಲಾದ ಗೋಧಿಯನ್ನು ಸಂಗ್ರಹಿಸಿಟ್ಟಿದ್ದಾರೆ. ಬೆಲೆ ಏರಿಕೆ ಆದಾಗ ಆ ಗೋಧಿ ಅದಾನಿ ಮಾರಾಟ ಮಾಡುತ್ತಾರೆ, ಆ ಮೂಲಕ ಪ್ರಧಾನಿಯವರ ಸ್ನೇಹಿತರು ಲಾಭ ಮಾಡಿಕೊಳ್ಳುತ್ತಾರೆ ಮತ್ತು ರೈತರು ನಷ್ಟ ಅನುಭವಿಸುತ್ತಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ ಮತ್ತು ಇದರ ವಿರುದ್ಧ ಹೋರಾಟ ನಡೆಸಲಾಗುತ್ತದೆ.
ಗುವಾಹಟಿ ವಿಮಾನ ನಿಲ್ದಾಣದಲ್ಲಿ ನನ್ನ ಹೂಗುಚ್ಛ ಹಿಡಿದ ಮಹಿಳೆಯೊಬ್ಬರು ನನ್ನ ಭೇಟಿ ಆದರು. ನೀವು ಎಲ್ಲಿಂದ ಬಂದವರು ಎಂದು ಆಕೆಗೆ ನಾನು ಕೇಳಿದೆ, ನಾವು ಅದಾನಿ ಪರವಾಗಿ ಬಂದವರು ಎಂದು ಆಕೆ ಹೇಳಿದರು. ಅದರ ಅರ್ಥ ಏನು ಎಂದು ನಾನು ಕೇಳಿದೆ. ಈ ಏರ್ಪೋರ್ಟ್ನ್ನು ಅದಾನಿಗೆ ಹಸ್ತಾಂತರಿಸಲಾಗಿದೆ ಎಂದು ಆಕೆ ಹೇಳಿದರು. ಅದಾನಿಗೆ ಏರ್ಪೋರ್ಟ್, ಬಂದರು, ದೊಡ್ಡ ದೊಡ್ಡ ಯೋಜನೆಗಳನ್ನು ನೀಡಲಾಗುತ್ತಿದೆ, ಆ ಮೂಲಕ ಇಡೀ ದೇಶವನ್ನೇ ಮಾರಲು ಸಿದ್ಧತೆ ನಡೆಯುತ್ತಿದೆ, ಆದರೆ ನಾವು ಅದನ್ನು ನಡೆಯಲು ಬಿಡಲ್ಲ
ಎಂದು ಸತ್ಯಪಾಲ್ ಮಲಿಕ್ ಹೇಳಿದ್ದಾರೆ.
ಒಂದು ವೇಳೆ ಕನಿಷ್ಠ ಬೆಂಬಲ ಬೆಲೆ ಜಾರಿಗೊಳಿಸದೇ ಹೋದರೆ ಮತ್ತು ಅದಕ್ಕೆ ಕಾನೂನು ಭದ್ರತೆ ನೀಡದೇ ಹೋದರೆ, ಮತ್ತೊಂದು ಹೋರಾಟ ನಡೆಯಲಿದೆ ಮತ್ತು ಈ ಬಾರಿ ಆ ಹೋರಾಟ ತೀವ್ರವಾಗಲಿದೆ. ಈ ದೇಶದ ರೈತರನ್ನು ನೀವು ಮಣಿಸಲು ಸಾಧ್ಯವಿಲ್ಲ, ಯಾಕೆಂದರೆ ಅವರ ಬಳಿಗೆ ನೀವು ಇಡಿ ಅಥವಾ ಆದಾಯ ತೆರಿಗೆ ಅಧಿಕಾರಿಗಳನ್ನು ಕಳುಹಿಸಲು ಸಾಧ್ಯವಿಲ್ಲ, ನೀವು ಹೇಗೆ ರೈತರನ್ನು ಬೆದರಿಸುತ್ತೀರಿ..?
ಎಂದು ಪ್ರಧಾನಿ ಮೋದಿ ಸರ್ಕಾರದ ಬಗ್ಗೆ ವ್ಯಂಗ್ಯವಾಡಿದ್ದಾರೆ.
ADVERTISEMENT