ಮಹತ್ವದ ಬೆಳವಣಿಗೆಯಲ್ಲಿ ಅದಾನಿ ಗ್ರೂಪ್ ದೇಶದ ಪ್ರಮುಖ ಸುದ್ದಿ ವಾಹಿನಿ NDTV ಗ್ರೂಪ್ ನಲ್ಲಿ ಹಣ ಹೂಡಿದೆ.
NDTV ಗ್ರೂಪ್ ನಲ್ಲಿ ಶೇಕಡಾ 29.15ರಷ್ಟು ಶೇರುಗಳನ್ನು ಖರೀದಿಸಿದೆ.
ಅದಾನಿ ಎಂಟರ್ ಪ್ರೈಸಸ್ ಲಿಮಿಟೆಡ್ ಭಾಗವಾಗಿರುವ AMG Media Networks Limited ಷೇರು ಖರೀದಿ ಮಾಡಿದೆ.
ಉಳಿದ ಶೇಕಡಾ 26ರಷ್ಟು ಷೇರನ್ನು IPO ಮೂಲಕ ಖರೀದಿಸಲಿದೆ.
ಈ ಮೂಲಕ NDTV ಅದಾನಿ ಹಿಡಿತಕ್ಕೆ ಸಿಗಲಿದೆ.
ಕಳೆದ ಆರ್ಥಿಕ ವರ್ಷದಲ್ಲಿ 421 ಕೋಟಿ ರೂಪಾಯಿ ಆದಾಯ ಗಳಿಸಿದ್ದ NDTV ಆ ವರ್ಷ 85 ಕೋಟಿ ರೂಪಾಯಿ ಲಾಭ ಗಳಿಸಿತ್ತು.
ಈ ಹಿಂದೆ ಪ್ರಮುಖ ಡಿಜಿಟಲ್ ಮೀಡಿಯಾ Quintನಲ್ಲೂ ಅದಾನಿ ಹೂಡಿಕೆ ಮಾಡಿದ್ದರು.
NDTVಯಲ್ಲಿ ಅದಾನಿ ಹೂಡಿಕೆ ಯೊಂದಿಗೆ ಮಾಧ್ಯಮ ಕ್ಷೇತ್ರದಲ್ಲೂ ಅದಾನಿ -ಅಂಬಾನಿ ನೇರ ಪೈಪೋಟಿ ಆರಂಭವಾಗಿದೆ.