ರಾಜ್ಯದ ಸರ್ಕಾರಿ ಮತ್ತು ಅರೆ ಸರ್ಕಾರಿ ಸೇವೆಯಲ್ಲಿರುವ ನೌಕರರು ಮತದಾರರ ಗುರುತಿನ ಚೀಟಿಯೊಂದಿಗೆ ತಮ್ಮ ಆಧಾರ್ ಕಾರ್ಡ್ ಜೋಡಣೆ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕೇಂದ್ರ ಚುನಾವಣಾ ಆಯೋಗದ ಆದೇಶದ ಮೇರೆಗೆ ರಾಜ್ಯದಲ್ಲೂ ಆಧಾರ್ ಜೋಡಣೆ ಮಾಡಿಸುವಂತೆ ಮುಖ್ಯ ಚುನಾವಣಾಧಿಕಾರಿ ನೀಡಿರುವ ಸೂಚನೆಯನ್ನು ಆದೇಶದಲ್ಲಿ ಉಲ್ಲೇಖಿಸಿದೆ.
ನೌಕರರು ಮಾತ್ರವಲ್ಲದೇ ಅವರ ಕುಟುಂಬ ಸದಸ್ಯರು ಮತದಾರರ ಚೀಟಿ ಯೊಂದಿಗೆ ಆಧಾರ್ ಜೋಡಿಸುವುದು ಕಡ್ಡಾಯವಾಗಿದೆ.
ಆಧಾರ್ ಜೋಡಣೆಯ ಪ್ರಗತಿ ವರದಿ ಸಲ್ಲಿಸಲು ನೋಡಲ್ ಅಧಿಕಾರಿ ನೇಮಿಸುವಂತೆಯೂ ಇಲಾಖೆಗಳಿಗೆ ಸೂಚಿಸಿದೆ.
ಆಧಾರ್ ಜೋಡಣೆಗೆ ಆನ್ ಲೈನ್ ಮೂಲಕ ದಾಖಲೆ ಸಲ್ಲಿಸಬಹುದಾಗಿದೆ.