ಚುನಾವಣೆ ದೇಣಿಗೆಗೆ ಸಂಬಂಧಿಸಿದ ವರದಿಯನ್ನು ಅಸೋಷಿಯೇಷನ್ ಫಾರ್ ಡೆಮಕ್ರಾಟಿಕ್ ರಿಫಾರ್ಮ್ಸ್ (ADR) ಬಯಲು ಮಾಡಿದೆ.
2004-05ರ ಆರ್ಥಿಕ ವರ್ಷದಿಂದ 2020-21 ರ ನಡುವೆ ರಾಷ್ಟ್ರೀಯ ಪಕ್ಷಗಳಿಗೆ 15,077 ಕೋಟಿ ರೂಪಾಯಿ ಗುಪ್ತ ದೇಣಿಗೆ (ಗುರುತು ಗೊತ್ತಿಲ್ಲದ ಮೂಲ) (Unknown Fund)ಬಂದಿದೆ.
2020-21ರ ಆರ್ಥಿಕ ವರ್ಷದಲ್ಲಿ ರಾಷ್ಟ್ರೀಯ(National Party ) ಮತ್ತು ಪ್ರಾದೇಶಿಕ ಪಕ್ಷಗಳಿಗೆ (Regional Party ) 690.67ಕೋಟಿ ರೂಪಾಯಿ ದೇಣಿಗೆ (Party Fund)ಹರಿದುಬಂದಿದೆ.
2020-21ರ ಆರ್ಥಿಕ ವರ್ಷದಲ್ಲಿ 8 ರಾಷ್ಟ್ರೀಯ ಪಕ್ಷಗಳಿಗೆ ಗೊತ್ತಿಲ್ಲದ ಮೂಲಗಳಿಂದ 426.78 ಕೋಟಿ ದೇಣಿಗೆ ಬಂದಿದೆ
27 ಪ್ರಾದೇಶಿಕ ಪಕ್ಷಗಳಿಗೆ 263.92 ಕೋಟಿ ದೇಣಿಗೆ ತಲುಪಿದೆ ಎಂದು ಎಡಿಆರ್ (ADR) ತಿಳಿಸಿದೆ.
2020-21ರ ಆರ್ಥಿಕ ವರ್ಷದಿಂದ 178.782 ಕೋಟಿ ಗುಪ್ತ ದೇಣಿಗೆ ಕಾಂಗ್ರೆಸ್ಗೆ (Congress) ಬಂದಿದೆ. ರಾಷ್ಟ್ರೀಯ ಪಕ್ಷಗಳಿಗೆ ಬಂದ ಇಂತಹ ದೇಣಿಗೆಗಳಲ್ಲಿ ಕಾಂಗ್ರೆಸ್ ಪಾಲು ಶೇಕಡಾ 41.89 ಎನ್ನುವುದು ಗಮನಾರ್ಹ,
ಇದೇ ಅವಧಿಯಲ್ಲಿ ಬಿಜೆಪಿಗೆ (BJP)ಗೊತ್ತಿಲ್ಲದ ಮೂಲಗಳಿಂದ 100.502 ಕೋಟಿ ರೂಪಾಯಿ ದೇಣಿಗೆ ಹರಿದುಬಂದಿದೆ.
ಪ್ರಾದೇಶಿಕ ಪಕ್ಷಗಳ ಪೈಕಿ, ವೈಎಸ್ಆರ್ಸಿಪಿ (YSR)ಗೆ 96.25 ಕೋಟಿ ದೇಣಿಗೆ ಪಡೆದು ಅಗ್ರಸ್ಥಾನದಲ್ಲಿದೆ. ಡಿಎಂಕೆ (DMK)80.20 ಕೋಟಿ, ಬಿಜೆಡಿ( BJD) 67 ಕೋಟಿ, ಎಂಎನ್ಎಸ್ (MNS) 5.77 ಕೋಟಿ, ಆಪ್ಗೆ (AAP)5.4 ಕೋಟಿ ದೇಣಿಗೆ ಪಡೆದು ನಂತರದ ಸ್ಥಾನಗಳಲ್ಲಿವೆ.
ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳಿಗೆ ಬಂದ 690.67 ಕೋಟಿ ದೇಣಿಗೆಯಲ್ಲಿ ಶೇಕಡಾ 87.02ರಷ್ಟು ದೇಣಿಗೆ ಎಲೆಕ್ಟೋರಲ್ ಬಾಂಡ್ (Electoral Bond’s)ರೂಪದಲ್ಲಿ ಬಂದಿದೆ ಎಂದು ಎಡಿಆರ್ ವರದಿ ಮಾಡಿದೆ.