1070 ದಿನಗಳ ಬಳಿಕ ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್ (Siddique Kappan) ಗೆ ಸರ್ವೋಚ್ಛ ನ್ಯಾಯಾಲಯ (Supreme Court) ಜಾಮೀನು ಮಂಜೂರು (Grants Bail) ಮಾಡಿದೆ.
ಉತ್ತರಪ್ರದೇಶ (Uttarpradesh) ರಾಜ್ಯದ ಹತ್ರಾಸ್ (Hathras)ನಲ್ಲಿ ಎಸಗಲಾಗಿದ್ದ ದಲಿತ (Dalit) ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಸಂಬಂಧ ತನಿಖಾ ವರದಿಗಾರಿಕೆಗೆ ತೆರಳಿದ್ದ ಸಿದ್ದಿಕ್ ಕಪ್ಪನ್ ಅವರನ್ನು ಉತ್ತರಪ್ರದೇಶ ಪೊಲೀಸರು (UP Police) ಬಂಧಿಸಿದ್ದರು.
ಅಕ್ಟೋಬರ್ 6, 2020ರಲ್ಲಿ ಬಂಧನದ ಬಳಿಕ ಕಪ್ಪನ್ ಮೇಲೆ ಉಗ್ರವಾದ ನಿರ್ಬಂಧಿಸುವ ಯುಎಪಿಎ (UAPA) ಕಾಯ್ದೆ ಮತ್ತು ಇತರೆ ಐಪಿಸಿ ಕಲಂಗಳ ಅಡಿ ಪ್ರಕರಣ ದಾಖಲಿಸಲಾಗಿತ್ತು.
ಕಪ್ಪನ್ಗೆ ಅಲಹಬಾದ್ ಹೈಕೋರ್ಟ್ (Allahabad High Court) ಜಾಮೀನು ನೀಡಿರಲಿಲ್ಲ. ಹೈಕೋರ್ಟ್ ತೀರ್ಪು ಪ್ರಶ್ನಿಸಿ ಕಪ್ಪನ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಜಾಮೀನು ಪಡೆದಿರುವ ಕಪ್ಪನ್ಗೆ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಯು ಯು ಲಲಿತ್ ಮತ್ತು ಎಸ್ ರವೀಂದ್ರ ಭಟ್ ಅವರ ಪೀಠ ಕೆಲವು ಷರತ್ತುಗಳನ್ನು (Bail Conditions) ವಿಧಿಸಿದೆ.
1. ಜೈಲಿನಿಂದ ಬಿಡುಗಡೆ ಆದ ಬಳಿಕ 6 ವಾರಗಳವರೆಗೆ ದೆಹಲಿಯ ಜಂಗಪುರದಲ್ಲೇ ಇರಬೇಕು.
2. 6 ವಾರಗಳ ಬಳಿಕ ತವರು ಕೇರಳಕ್ಕೆ ಹೋಗಲು ಅನುಮತಿ
3. ವಿಚಾರಣಾ ನ್ಯಾಯಾಲಯದ (Trial Court) ಅನುಮತಿ ಇಲ್ಲದೇ ದೆಹಲಿ (Delhi) ಬಿಟ್ಟು ತೆರಳುವಂತಿಲ್ಲ.
4. ಜೈಲಿನಿಂದ ಬಿಡುಗಡೆ ಆದ ಮೊದಲ 6 ವಾರ ಪ್ರತಿ ಸೋಮವಾರ ಪೊಲೀಸ್ ಠಾಣೆಗೆ (Police Station) ಖುದ್ದಾಗಿ ಹಾಜರಾಗಬೇಕು.
6. ಕೇರಳ (Kerala)ಕ್ಕೆ ಹೋದ ಬಳಿಕವೂ ಪ್ರತಿ ಸೋಮವಾರ ಠಾಣೆಗೆ ಹಾಜರಾಗಬೇಕು.
7. ಪಾಸ್ಪೋರ್ಟ್ನ್ನು (Passport) ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಬೇಕು
ADVERTISEMENT
ADVERTISEMENT