ಸುದೀರ್ಘ 6 ವರ್ಷಗಳ ನಂತರ ಕರ್ನಾಟಕ ಲೋಕಾಯುಕ್ತಕ್ಕೆ (Karnataka Lokayukta) ಹೈ ಪವರ್ ಲಭಿಸಿದೆ. ನಾಳೆಯಿಂದಲೇ ಕಣಕ್ಕೆ ಇಳಿಯಲಿರುವ ಲೋಕಾಯುಕ್ತ, ರಾಜ್ಯಾದ್ಯಂತ ಭ್ರಷ್ಟಾಚಾರದಡಿ ಪ್ರಕರಣ ದಾಖಲಿಸಲು ಸೂಚನೆ ನೀಡಿದೆ.
ರಾಜ್ಯ ಹೈಕೋರ್ಟ್ ಕೆಲ ದಿನಗಳ ಹಿಂದೆಯಷ್ಟೇ ಸಿದ್ದರಾಮಯ್ಯನವರ ಸರ್ಕಾರ ಸ್ಥಾಪಿಸಿದ್ದ ಎಸಿಬಿ (Anti Corruption Bureau) ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಅಲ್ಲದೇ, ಪ್ರಸ್ತುತ ಎಸಿಬಿಯಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಲೋಕಾಯುಕ್ತಕ್ಕೆ (Karnataka Lokayukta) ವರ್ಗಾವಣೆ ಮಾಡುವಂತೆ ಸೂಚನೆ ನೀಡಿತ್ತು.
ಇದೀಗ, ಭ್ರಷ್ಠಚಾರದ ಪ್ರಕರಣಗಳನ್ನು ಲೋಕಾಯುಕ್ತದಲ್ಲಿ ದಾಖಲಿಸುವಂತೆ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ : BIG BREAKING: ಕರ್ನಾಟಕದಲ್ಲಿ ACBಯೇ ರದ್ದು
ಈ ಬಗ್ಗೆ ಸುತ್ತೋಲೆ ಹೊರಡಿಸಿರುವ ಕರ್ನಾಟಕ ಲೋಕಾಯುಕ್ತದ ಎಡಿಜಿಪಿಯವರು, ಹೈಕೋರ್ಟ್ ಆದೇಶದತೆ ಎಲ್ಲಾ ಲೋಕಾಯುಕ್ತ ಎಸ್ಪಿ,ಡಿಎಸ್ಪಿ, ಹಾಗೂ ಪೊಲೀಸ್ ಇನ್ಸ್ಪೆಕ್ಟರ್ಗಳು 1998 ರ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಂತೆ, ಇನ್ನು ಮುಂದೆ ಸಾರ್ವಜನಿಕರಿಂದ ಭ್ರಷ್ಟಾಚಾರ ಸಂಬಂಧದ ದೂರನ್ನು ದಾಖಲಿಸುವಂತೆ ಸೂಚಿಸಿದ್ದಾರೆ.
ಈ ಮೂಲಕ ಅಧಿಕೃತವಾಗಿ ಲೋಕಾಯುಕ್ತ ಇಲಾಖೆ ಭ್ರಷ್ಟಾಚಾರ ನಿಯಂತ್ರಣದ ರಣಾಂಗಣಕ್ಕೆ ಎಂಟ್ರಿಕೊಟ್ಟಿದೆ.
ಇದನ್ನೂ ಓದಿ : ಎಸಿಬಿ ರದ್ದು ಪ್ರಶ್ನಿಸಿ ಸುಪ್ರಿಂ ಕೋರ್ಟ್ಗೆ ಮೇಲ್ಮನವಿ