ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಗ್ನಿಪಥ ಯೋಜನೆ ಮೂಲಕ ಮೂರು ಸೇನೆಗಳಿಗೆ ವರ್ಷಕ್ಕೆ 46 ಸಾವಿರ ಸೈನಿಕರನ್ನು ನೇಮಕಾತಿ ಮಾಡಿಕೊಳ್ಳುವುದಾಗಿ ಘೋಷಿಸಿದೆ.
ಈ ಯೋಜನೆಯಡಿ ಸೇನೆ ಸೇರಲು 17.5 ವರ್ಷದಿಂದ ಗರಿಷ್ಠ 21 ವರ್ಷದವರೆಗಿನ ವಯೋಮಾನದವರಿಗೆ ಮಾತ್ರ ಅವಕಾಶ ಸಿಗಲಿದೆ. ಅಂದರೆ 21ನೇ ವಯಸ್ಸು ದಾಟಿದ ಬಳಿಕ ಸೇನೆ ಸೇರಲು ಈ ಯೋಜನೆಯಡಿ ಅವಕಾಶ ಇರಲ್ಲ.
ಪ್ರತಿ ವರ್ಷ ಆಯ್ಕೆ ಆಗುವ ಸೈನಿಕರ ಪೈಕಿ ಕೇವಲ ಶೇಕಡಾ 25ರಷ್ಟು ಮಂದಿ ಮಾತ್ರ ಸೇನೆಯಲ್ಲಿ ಮೆರಿಟ್ ಆಧಾರದಲ್ಲಿ 15 ವರ್ಷ ಸೈನಿಕರಾಗಿ ಮುಂದುವರಿಯಲು ಅವಕಾಶ ಇದೆ. ಉಳಿದ ಶೇಕಡಾ 75 ಮಂದಿ ನೇಮಕಗೊಂಡ 4 ವರ್ಷದ ಬಳಿಕ ಶಾಶ್ವತವಾಗಿ ಸೇನೆಯಿಂದ ನಿವೃತ್ತಿ ಆಗಲಿದ್ದಾರೆ. ಅಂದರೆ ಹದಿನೇಳುವರೆ ವರ್ಷದಲ್ಲಿ ಸೇನೆಗೆ ಆಯ್ಕೆ ಆದರೆ ಇಪ್ಪತ್ತೊಂದುವರೆ ವರ್ಷಕ್ಕೆ ಸೇನೆಯಿಂದ ನಿವೃತ್ತಿ ಆಗುತ್ತಾರೆ. 21ನೇ ವಯಸ್ಸಿನಲ್ಲಿ (ಗರಿಷ್ಠ ವಯೋಮಾನ)ದಲ್ಲಿ ನೇಮಕವಾದರೆ 25ನೇ ವರ್ಷಕ್ಕೆ ಸೇನೆಯಿಂದ ನಿವೃತ್ತಿ ಆಗ್ತಾರೆ.
ಹಾಗಾದರೆ ಈ 4 ವರ್ಷದ ಅವಧಿಯಲ್ಲಿ ಸೈನಿಕರಿಗೆ ಸರ್ಕಾರ ಎಷ್ಟು ವೇತನ ನೀಡುತ್ತದೆ..? ಪ್ರತಿ ತಿಂಗಳು ಮಾಸಿಕ ವೇತನದಲ್ಲಿ ಶೇಕಡಾ 30ರಷ್ಟನ್ನು ಸರ್ಕಾರ ಕಡಿತಗೊಳಿಸಿ ಅದನ್ನು ಸೇವಾನಿಧಿಯಲ್ಲಿ ಜಮೆ ಮಾಡುತ್ತದೆ. ಪ್ರತಿ ತಿಂಗಳು ಅಷ್ಟೇ ಮೊತ್ತವನ್ನು ಸರ್ಕಾರ ಕೂಡಾ ತನ್ನ ಕಡೆಯಿಂದ ಜಮೆ ಮಾಡುತ್ತದೆ. 4ನೇ ವರ್ಷದಲ್ಲಿ ಅಂದರೆ ಸೇನೆಯಲ್ಲಿ ಸೇವಾವಧಿ ಪೂರ್ಣಗೊಂಡು ನಿವೃ
ಮೊದಲನೇ ವರ್ಷ:
ವೇತನ: 30 ಸಾವಿರ ರೂಪಾಯಿ. ಇದರಲ್ಲಿ ಸರ್ಕಾರ ಸೇವಾ ನಿಧಿ ಯೋಜನೆಗಾಗಿ ಸೈನಿಕರ ಸಂಬಳದಲ್ಲೇ 9 ಸಾವಿರ ರೂಪಾಯಿ ಕಡಿತ ಮಾಡಿಕೊಳ್ಳುತ್ತದೆ. ಹೀಗಾಗಿ ಮೊದಲ ವರ್ಷ ಸೈನಿಕರಿಗೆ ಪ್ರತಿ ತಿಂಗಳು ಕೈಗೆ ಸಿಗುವ ಸಂಬಳ – 21 ಸಾವಿರ ರೂಪಾಯಿ.
ಎರಡನೇ ವರ್ಷ:
ವೇತನ: 33 ಸಾವಿರ ರೂಪಾಯಿ. ಇದರಲ್ಲಿ ಸರ್ಕಾರ ಸೇವಾ ನಿಧಿ ಯೋಜನೆಗಾಗಿ ಸೈನಿಕರ ಸಂಬಳದಲ್ಲೇ 9,900 ರೂಪಾಯಿ ಕಡಿತ ಮಾಡಿಕೊಳ್ಳುತ್ತದೆ. ಹೀಗಾಗಿ ಮೊದಲ ವರ್ಷ ಸೈನಿಕರಿಗೆ ಪ್ರತಿ ತಿಂಗಳು ಕೈಗೆ ಸಿಗುವ ಸಂಬಳ – 23,100 ಸಾವಿರ ರೂಪಾಯಿ.
ಮೂರನೇ ವರ್ಷ:
ವೇತನ: 36 ಸಾವಿರದ 500 ರೂಪಾಯಿ. ಇದರಲ್ಲಿ ಸರ್ಕಾರ ಸೇವಾ ನಿಧಿ ಯೋಜನೆಗಾಗಿ ಸೈನಿಕರ ಸಂಬಳದಲ್ಲೇ 10,950 ರೂಪಾಯಿ ಕಡಿತ ಮಾಡಿಕೊಳ್ಳುತ್ತದೆ. ಹೀಗಾಗಿ ಮೊದಲ ವರ್ಷ ಸೈನಿಕರಿಗೆ ಪ್ರತಿ ತಿಂಗಳು ಕೈಗೆ ಸಿಗುವ ಸಂಬಳ – 25,580 ಸಾವಿರ ರೂಪಾಯಿ.
ನಾಲ್ಕನೇ ವರ್ಷ:
ವೇತನ: 40 ಸಾವಿರ ರೂಪಾಯಿ. ಇದರಲ್ಲಿ ಸರ್ಕಾರ ಸೇವಾ ನಿಧಿ ಯೋಜನೆಗಾಗಿ ಸೈನಿಕರ ಸಂಬಳದಲ್ಲೇ 12 ಸಾವಿರ ರೂಪಾಯಿ ಕಡಿತ ಮಾಡಿಕೊಳ್ಳುತ್ತದೆ. ಹೀಗಾಗಿ ಮೊದಲ ವರ್ಷ ಸೈನಿಕರಿಗೆ ಪ್ರತಿ ತಿಂಗಳು ಕೈಗೆ ಸಿಗುವ ಸಂಬಳ – 28 ಸಾವಿರ ರೂಪಾಯಿ.
ನಾಲ್ಕೇ ವರ್ಷಕ್ಕೆ ನಿವೃತ್ತಿ: 11.71 ಲಕ್ಷ ರೂಪಾಯಿ ಪಾವತಿ:
ಸೇನೆಗೆ ಸೇರಿದ ನಾಲ್ಕೇ ವರ್ಷದಲ್ಲಿ ನಿವೃತ್ತರಾಗುವ ಸೈನಿಕರಿಗೆ ನಿವೃತ್ತಿಯ ಅವಧಿಯಲ್ಲಿ 11 ಲಕ್ಷದ 71 ಸಾವಿರ ರೂಪಾಯಿಯನ್ನು ಪಾವತಿಸಲಾಗುತ್ತದೆ. ಇದರಲ್ಲಿ ಯುವ ಸೈನಿಕರ ಸಂಬಳದಲ್ಲಿ ಪ್ರತಿ ತಿಂಗಳು ಮಾಡಲಾದ ಶೇಕಡಾ 30ರಷ್ಟು ವೇತನ ಕಡಿತದ ಮೊತ್ತ ಅಂದರೆ 5.2 ಲಕ್ಷ ರೂಪಾಯಿ ಮತ್ತು ಸರ್ಕಾರದಿಂದ ಅಷ್ಟೇ ಕೊಡುಗೆ ಅಂದರೆ 5.2 ಲಕ್ಷ ರೂಪಾಯಿ ಮತ್ತು ಇದರ ಮೇಲಿನ ಬಡ್ಡಿ ಮೊತ್ತವೂ ಸೇರಿದೆ.
ನಾಲ್ಕೇ ವರ್ಷಕ್ಕೆ ನಿವೃತ್ತಿ: ಪಿಂಚಣಿ ಸಿಗಲ್ಲ:
ನಾಲ್ಕೇ ವರ್ಷಕ್ಕೆ ನಿವೃತ್ತಿ ಆಗುವ ಸೈನಿಕರಿಗೆ ನಿವೃತ್ತಿ ಬಳಿಕ ಪಿಂಚಣಿ ಸಿಗಲ್ಲ. ನಾಲ್ಕು ವರ್ಷದ ಬಳಿಕವೂ ಉಳಿದ 15 ವರ್ಷ ಸೇನೆಯಲ್ಲಿ ಸೇನೆ ಸಲ್ಲಿಸಲು ಅವಕಾಶ ಸಿಗುವ (ಹೊಸದಾಗಿ ನೇಮಕಗೊಂಡ ಶೇಕಡಾ 25ರಷ್ಟು ಸೈನಿಕರಿಗೆ ಮಾತ್ರ) ಸೈನಿಕರಿಗೆ ನಿವೃತ್ತಿ ಬಳಿಕವೂ ಪಿಂಚಣಿ ಸಿಗಲಿದೆ.