ಕೇಂದ್ರ ಸರ್ಕಾರ ಜೂನ್ ತಿಂಗಳಲ್ಲಿ ಸೇನಾ ನೇಮಕಾತಿ ಯೋಜನೆಯಾದ ಅಗ್ನಿಪಥ ಯೋಜನೆಯನ್ನು ಘೋಷಣೆ ಮಾಡಿತ್ತು. ಈ ಯೋಜನೆಯನ್ನು ವಿರೋಧಿಸಿ ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಬೃಹತ್ ಪ್ರತಿಭಟನೆಗಳು ನಡೆದಿದ್ದವು, ಅಲ್ಲದೇ ರೈಲ್ವೇ ಇಲಾಖೆಯ ಆಸ್ತಿ ಪಾಸ್ತಿಗೆ ನಷ್ಟಮಾಡಿ ಹೋರಾಟ ನಡೆಸಲಾಗಿತ್ತು.
ಇದೀಗ ಈ ಬಗ್ಗೆ ರಾಜ್ಯಸಭೆಯಲ್ಲಿ ಉತ್ತರ ನೀಡಿರುವ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಉತ್ತರ ನೀಡಿದ್ದಾರೆ. ಅಗ್ನಿಪಥ ಯೋಜನೆಯನ್ನು ವಿರೋಧಿಸಿದ ಹೋರಾಟದಲ್ಲಿ ರೈಲ್ವೆಯ ಆಸ್ತಿ ಪಾಸ್ತಿಗಳನ್ನು ನಷ್ಟ ಮಾಡಲಿದೆ. ಒಟ್ಟಾರೆ ಈ ಉಗ್ರ ಹೋರಾಟದಲ್ಲಿ ರೈಲ್ವೇ ಇಲಾಖೆಗೆ ಬರೋಬ್ಬರಿ 259.44 ಕೋ.ರೂ ನಷ್ಟವಾಗಿದೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಜೂನ್ ತಿಂಗಳಲ್ಲಿ ಅಗ್ನಿಪಥ ಯೋಜನೆಯನ್ನು ಜಾರಿ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದರು. ಆ ಬೆನ್ನಲ್ಲೇ, ಕೊಪೋದ್ರಿಕ್ತರಾಗಿದ್ದ ಸೇನಾ ಸೇವಾಕಾಂಕ್ಷಿಗಳು ರೈಲ್ವೇ ಇಲಾಖೆಯೆ ಹಲವು ರೈಲುಗಳಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಗಲಾಟೆಯಲ್ಲಿ 12 ರೈಲುಗಳು ಬೆಂಕಿಗೆ ಅಹುತಿಯಾಗಿದ್ದವು. 300 ರೈಲುಗಳ ಸಂಚಾರಕ್ಕೆ ತೊಂದರೆಯಾಗಿತ್ತು, 214 ರೈಲುಗಳ ಸಂಚಾರ ರದ್ದಾಗಿತ್ತು ಮತ್ತು 12 ರೈಲುಗಳು ಮಾರ್ಗ ಬದಲಾವಣೆ ಮಾಡಿದ್ದವು.
ಈಗಾಗಲೇ ಅಗ್ನಿಪಥ ಯೋಜನೆಯಡಿಯಲ್ಲಿ ಅಗ್ನಿವೀರರ ನೇಮಕಾತಿ ಆರಂಭವಾಗಿದೆ.
ಅಗ್ನಿಪಥ ಯೋಜನೆಯಡಿಯಲ್ಲಿ 17.5 ವರ್ಷದಿಂದ 21 ವರ್ಷದ ಒಳಗಿನವರು ಮಾತ್ರ ಅಗ್ನಿವೀರರಾಗಿ ನೇಮಕವಾಗಬಹುದು. ಪ್ರತಿಭಟನೆಯ ನಂತರ, ಈ ಒಂದು ವರ್ಷಕ್ಕೆ ಮಾತ್ರ ವಿನಾಯಿತಿ ನೀಡಿ ವಯಸ್ಸಿನ ಮಿತಿಯನ್ನು 23 ವರ್ಷಕ್ಕೆ ಹೆಚ್ಚಿಸಲಾಗಿದೆ.