ನೂತನ ‘ಅಗ್ನಿಪಥ್’ ಯೋಜನೆಯಡಿ ಭಾರತೀಯ ವಾಯು ಸೇನೆ ಹೊರಡಿಸಿದ್ದ ಅಧಿಸೂಚನೆಗೆ ಕೇವಲ 4 ದಿನಗಳಲ್ಲಿಯೇ ಬರೋಬ್ಬರಿ 94,281 ಅರ್ಜಿಗಳು ಬಂದಿವೆ ಎಂದು ವಾಯು ಸೇನೆ ತಿಳಿಸಿದೆ.
ಇದೇ ತಿಂಗಳ ಜೂನ್ 14 ರಂದು ಭಾರತ ಸರ್ಕಾ ಸೇನಾ ನೇಮಕಾತಿಗಾಗಿ ಅಗ್ನಿಪಥ್ ಯೋಜನೆಯನ್ನು ಜಾರಿ ಮಾಡಿತ್ತು. ಈ ಯೋಜನೆ ವಿರೋಧಿಸಿ ದೇಶದ ಬಹುತೇಕ ರಾಜ್ಯಗಳಲ್ಲಿ ಸೇನಾ ನೇಮಕಾತಿ ಆಕಾಂಕ್ಷಿಗಳು ಬೃಹತ್ ಪ್ರತಿಭಟನೆ ನಡೆಸಿದ್ದರು. ಅಲ್ಲಲ್ಲಿ ಈ ಪ್ರತಿಭಟನೆ ಹಿಂಸೆ ತಿರುಗಿತ್ತು.
ವಾಯುಸೇನೆಯ ಅಗ್ನಿಪಥ್ ಸೇನಾ ನೇಮಕಾತಿಗೆ ಸೋಮವಾರದ ಬೆಳಿಗ್ಗೆ 10:30 ರ ವರೆಗೆ ಒಟ್ಟಾರೆಯಾಗಿ 94,281 ಅರ್ಜಿಗಳು ಬಂದಿವೆ. ಜುಲೈ 5 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಎಂದು ರಕ್ಷಣಾ ಇಲಾಖೆಯ ಮಾಧ್ಯಮ ವಕ್ತಾರ ಭರತ್ ಭೂಷಣ್ ಅವರು ಟ್ವೀಟ್ ಮಾಡಿದ್ದಾರೆ.
ಭಾನುವಾರದವರೆಗೆ 56,960 ಅರ್ಜಿಗಳನ್ನು ವಾಯುಸೇನೆ ಸ್ವೀಕರಿಸಿತ್ತು.
अपने सपनों को साकार करें, #अग्निवीर बनें।
युवाओं में भर्ती के प्रति ज़बरदस्त रुचि।आज सुबह 10:30 बजे तक अग्निवीर वायु बनने के लिए 94,281 आवेदकों ने पंजीकरण किया।
पंजीकरण की अंतिम तिथि- 5 जुलाई, 2022
और जानकारी के लिए क्लिक करें – https://t.co/fwVvpkoajR#Agnipath #AgniveerVayu pic.twitter.com/0wNMYJTkcr— PRO, Hyderabad, Ministry of Defence (@dprohyd) June 27, 2022
ಅಗ್ನಿಪಥ್ ಯೋಜನೆಯಡಿ 17.5 ವರ್ಷದಿಂದ 21 ವರ್ಷದ ವರೆಗಿನ ಯುವಕರು ಸೇನೆಗೆ ಅರ್ಜಿ ಸಲ್ಲಿಸಬಹುದು. ಈ ಸೇವಾವಧಿ 4 ವರ್ಷವಿರಲಿದೆ. ಇದರಲ್ಲಿ 25 ರಷ್ಟು ಸೈನಿಕರನ್ನು ಸೇನೆಯಲ್ಲಿಯೇ ಉಳಿಸಿಕೊಳ್ಳಲಾಗುತ್ತದೆ.
ಸೇನಾ ಆಕಾಂಕ್ಷಿಗಳಿಂದ ಪ್ರತಿರೋಧ ಬಂದ ಹಿನ್ನೆಲೆಯಲ್ಲಿ ಒಂದು ಬಾರಿಗೆ ಅನ್ವಯವಾಗುವಂತೆ ವಯಸ್ಸಿನ ಮಿತಿಯನ್ನು 23 ವರ್ಷಕ್ಕೆ ಹೆಚ್ಚಿಸಿ ರಕ್ಷಣಾ ಇಲಾಖೆ ಆದೇಶ ಹೊರಡಿಸಿದೆ.