ಒಮಾನ್ ದೇಶದ ಮಸ್ಕತ್ನಿಂದ ಕೇರಳದ ಕೊಚ್ಚಿಗೆ ಪ್ರಯಾಣಿಸಬೇಕಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದ ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು (Air India Plain Catches Fire), ಪ್ರಯಾಣಿಕರು ಸಂಭವಿಸಬಹುದಾಗಿದ್ದ ದುರಂತದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ.
ಮಸ್ಕತ್ ನಗರದ ವಿಮಾನ ನಿಲ್ದಾಣದಲ್ಲಿ 145 ಜನ ಪ್ರಯಾಣಿಕರನ್ನು ಹೊತ್ತಿದ್ದ ಏರ್ ಇಂಡಿಯಾ ಏಕ್ಸ್ಪ್ರೆಸ್ ವಿಮಾನ ಹೊರಡಲು ಸಿದ್ಧವಾಗಿ ನಿಂತಿತ್ತು. ಇನ್ನೇನೆ ವಿಮಾನ್ ಟೇಕ್ ಆಫ್ ಆಗಬೇಕು ಎನ್ನುವ ಸ್ವಲ್ಪ ಸಮಯದಲ್ಲಿಯೇ ವಿಮಾನದ ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ (Air India Plain Catches Fire).
ತಕ್ಷಣಕ್ಕೆ ಎಚ್ಚೆತ್ತ ವಿಮಾನ ಹಾಗೂ ವಿಮಾನ ನಿಲ್ದಾಣದ ಸಿಬ್ಬಂದಿ 4 ಜನ ಶಿಶುಗಳನ್ನು ಸೇರಿದಂತೆ 145 ಜನ ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಯಾವುದೇ ಗಾಯಗಳಾದ ಬಗ್ಗೆ ವರದಿಯಾಗಿಲ್ಲ. ತಕ್ಷಣವೇ ವಿಮಾನವನ್ನು ಟರ್ಮಿನಲ್ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಪ್ರಯಾಣಿಕರಿಗೆ ಬದಲಿ ವಿಮಾನದ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ : ಮಹಾರಾಷ್ಟ್ರ : ತರಬೇತಿ ವಿಮಾನ ಪತನ – ಪೈಲಟ್ಗೆ ಗಾಯ
ಆರಂಭದಲ್ಲಿ ಸರ್ಕಾರಿ ಒಡೆತನದಲ್ಲಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ನ್ನು ಟಾಟಾ ಗ್ರೂಪ್ ಖರೀದಿಸಿದೆ. ಇದು ಭಾರತದ ಮೊದಲ ಅಂತರಾಷ್ಟ್ರೀಯ ಬಜೆಟ್ ಕ್ಯಾರಿಯರ್ (ಅನುಕೂಲಿತ ವಿಮಾನ ದರ) ಸೇವೆ ನೀಡಿದ ಸಂಸ್ಥೆಯಾಗಿದೆ. ಆದ್ದರಿಂದಾಗೆಯೇ, ಆಗ್ನೇಯ, ಪಶ್ಚಿಮ ಏಷ್ಯಾ ಮತ್ತು ಮಧ್ಯಪ್ರಾಚ್ಯ ದೇಶಗಳ ಪ್ರಯಾಣಿಕರೊಂದಿಗೆ ನಿಖಟತೆ ಹೊಂದಿದೆ.
2 ತಿಂಗಳ ಹಿಂದೆ ಕಲ್ಕತ್ತಾದಿಂದ ದುಬೈಗೆ ಹೊರಟ್ಟಿದ್ದ ಏರ್ಲೈನ್ಸ್ ವಿಮಾನ ಸುಟ್ಟ ವಾಸನೆಯಿಂದಾಗಿ ಮಸ್ಕತ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿತ್ತು.
ಜುಲೈ ತಿಂಗಳಲ್ಲಿ ಭಾರತದ ವಿಮಾನಯಾನ ಸಂಸ್ಥೆಗಳು ಇದೇ ರೀತಿ ಹಲವು ಸಮಸ್ಯೆಗಳನ್ನು ಎದುರಿಸಿವೆ. ಇದನ್ನೂ ಓದಿ : ತಾಂತ್ರಿಕ ದೋಷ : ಪಾಕಿಸ್ತಾನದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಭಾರತೀಯ ವಿಮಾನ