ಬಾಲಿವುಡ್ ನ ಸೂಪರ್ ಜೋಡಿ ಐಶ್ವರ್ಯಾ ರೈ- ಅಭಿಷೇಕ್ ಬಚ್ಚನ್ ವಿವಾಹ ಮುರಿದುಬೀಳಲಿದೆ ಎನ್ನುವ ವದಂತಿ ದಟ್ಟವಾಗಿ ಹರಿದಾಡ್ತಿರುವ ನಡುವೆಯೇ ಇದೀಗ ಐಶ್ವರ್ಯಾ ರೈ ಬೇರೆ ಮನೆಯಲ್ಲಿ ವಾಸ ಮಾಡುತ್ತಿರವ ಬಗ್ಗೆ ಖಚಿತ ಮಾಹಿತಿ ಲಭಿಸಿದೆ.
ಬಚ್ಚನ್ ಕುಟುಂಬಸ್ಥರೊಂದಿಗೆ ವಾಸಿಸಲು ಇಷ್ಟಪಡ ಐಶ್ವರ್ಯಾ, ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎನ್ನಲಾಗ್ತಿದೆ.
ಇನ್ನು ಐಶ್ವರ್ಯಾ-ಅಭಿಷೇಕ್ ದಾಂಪತ್ಯದಲ್ಲಿ ಕೆಲ ವರ್ಷಗಳಿಂದ ಕಲಹ ಉಂಟಾಗಿದ್ದು, ಮಗಳು ಆರಾಧ್ಯಾಳ ಕಾರಣದಿಂದಾಗಿ ಮಾತ್ರವಷ್ಟೇ ದಂಪತಿ ಒಟ್ಟಾಗಿ ಜೀವನ ನಡೆಸುತ್ತಿದ್ದಾರೆ ಅಂತ ಅವರ ಆಪ್ತ ಮೂಲಗಳು ತಿಳಿಸಿವೆ. ಅಲ್ಲದೆ ಅತ್ತೆ ಜಯಾ ಬಚ್ಚನ್ ಸೊಸೆ ಐಶ್ವರ್ಯಾ ಪರಸ್ಪರ ಮಾತನಾಡದೆ ಹಲವು ವರ್ಷಗಳೇ ಕಳೆದಿವೆಯಂತೆ. ಈ ವೃತ್ತಾಂತದಿಂದಾಗಿ ಅಭಿಷೇಕ್ ಬಚ್ಚನ್ ತುತ್ತಾ-ಮುತ್ತಾ ಎನ್ನುವ ಸ್ಥಿತಿಯಲ್ಲಿದ್ದಾರೆ ಎನ್ನಲಾಗ್ತಿದೆ.
ಇದೂ ಸಾಲದೆಂಬಂತೆ ಬಚ್ಚನ್ ಪುತ್ರಿ ಶ್ವೇತಾ ಇತ್ತೀಚೆಗೆ ಬಚ್ಚನ್ ನಿವಾಸಕ್ಕೆ ಶಿಫ್ಟ್ ಆಗಿರೋದು ಐಶ್ವರ್ಯಾಗೆ ಅತ್ತೆ-ಮಾವನ ಮೇಲೆ ಮತ್ತಷ್ಟು ಅಸಮಾಧಾನ ಮೂಡಿಸಿದೆ.
ಇನ್ನು ಈ ಎಲ್ಲಾ ಬೆಳಗಣಿಗಳ ಮಧ್ಯೆ ದಾಂಪತ್ಯವನ್ನು ಅಂತ್ಯ ಮಾಡಿಕೊಳ್ಳಲು ಒಪ್ಪದ ಈ ಸ್ಟಾರ್ ದಂಪತಿ, ತಮ್ಮ ಪುತ್ರಿ ಆರಾಧ್ಯಾಳ ಭವಿಷ್ಯದ ದೃಷ್ಟಿಯಿಂದ ವಿಚ್ಚೇದನದ ಕುರಿತಾಗಿ ಯೋಚಿಸಿಲ್ಲ ಅಂತ ಬಚ್ಚನ್ ಕುಟುಂಬದ ಆಪ್ತ ಮೂಲಗಳು ಮಾಹಿತಿ ನೀಡಿವೆ.